ತಿರುವನಂತಪುರ: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಮದು ತಿಳಿದುಬಂದಿದೆ.
ಹಸಿರು ನ್ಯಾಯಮಂಡಳಿಯ ಒಪ್ಪಿಗೆ ದೊರೆತ ನಂತರ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ ಎಂದು ವರದಿಯಾಗಿದೆ. ಜನನಿಬಿಡ ಪ್ರದೇಶವನ್ನು ಪರಿಸರ ದುರ್ಬಲ ವಲಯದ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.
ಪರಿಸರ ಸೂಕ್ಷ್ಮ ವಲಯದಿಂದ 880 ಚದರ ಕಿ.ಮೀ.ಗಿಂತ ಹೆಚ್ಚಿನ ಪ್ರದೇಶವನ್ನು ಹೊರಗಿಡಬೇಕೆಂದು ಕೇರಳ ಆರಂಭದಲ್ಲಿ ಬೇಡಿಕೆ ಇಟ್ಟಿತ್ತು. ಕಸ್ತೂರಿ ರಂಗನ್ ಸಮಿತಿಯು ಪಶ್ಚಿಮ ಘಟ್ಟಗಳಿಗೆ ಕೇರಳದಲ್ಲಿ 13,109 ಚ.ಕಿ.ಮೀ ಪರಿಸರ ದುರ್ಬಲ ಪ್ರದೇಶಗಳನ್ನು ಶಿಫಾರಸು ಮಾಡಿತ್ತು.
ಇದು ಕೇರಳದ ಹಲವು ಭಾಗಗಳಿಂದ ಪ್ರತಿಭಟನೆಗೆ ಕಾರಣವಾಯಿತು. ಇದರ ಬೆನ್ನಲ್ಲೇ ಕೇರಳ ಉಮ್ಮನ್ ವಿ ಉಮ್ಮನ್ ಸಮಿತಿಯನ್ನು ನೇಮಿಸಲಾಯಿತು. ನಂತರ ಸಮಿತಿಯು ಕೇವಲ 9,903.7 ಚ.ಕಿ.ಮೀ. ವ್ಯಾಪ್ತಿ ಗುರುತಿಸಿತು.
ಪರಿಸರ ದುರ್ಬಲ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧವಿದೆ. ಕರಡು ಅಧಿಸೂಚನೆಯು ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತದೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕೇರಳ ರಿಯಾಯಿತಿ ಕೋರಿತ್ತು. ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಅವರು 1,337.24 ಚ.ಕಿ.ಮೀ.ನಷ್ಟು ಭೂಮಿಯನ್ನು ತೆರವುಗೊಳಿಸಬೇಕು ಎಂದು ಈ ಹಿಂದೆ ಹೇಳಿದ್ದರು.
ಕೇರಳದ ಬೇಡಿಕೆಗಳಿಗೆ ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ರಿಯಾಯಿತಿ ವಲಯ ಎಂದು ಗುರುತಿಸಲಾಗುವುದು ಎಂದು ಕೇಂದ್ರ ಭರವಸೆ ನೀಡಿದೆ. ಆದರೆ, ಯಾವ ರಿಯಾಯಿತಿಗಳಿವೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಿಲ್ಲ.