ಕಾಸರಗೋಡು: ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ನಿಟ್ಟನಲ್ಲಿ ಕೇರಳ ಸರ್ಕಾರ ಹೊರತಂದಿರುವ 'ನನ್ನ ಜಿಲ್ಲೆ' ಮೊಬೈಲ್ ಆ್ಯಪ್‍ನ ಪ್ರಚಾರಾರ್ಥ ಸೈಕಲ್ ರ್ಯಾಲಿ ಕಾಞಂಗಾಡಿನಲ್ಲಿ ನಡೆಯಿತು. ಕಾಸರಗೋಡು ಜಿಲ್ಲಾಡಳಿತ ಮತ್ತು ಜಿಲ್ಲಾ ಪಡ್ಲರ್ಸ್ ನೇತೃತ್ವದಲ್ಲಿ ಮನ್ಸೂರ್ ಆಸ್ಪತ್ರೆ ಸಹಕಾರದೊಂದಿಗೆ ರ್ಯಾಲಿ ಆಯೋಜಿಸಲಾಗಿತ್ತು.
ಶಾಸಕ ಇ.ಚಂದ್ರಶೇಖರನ್ ಧ್ವಜ ಕಾಣಿಸುವ ಮೂಲಕ ರ್ಯಾಲಿ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಡಿ.ಅರ್. ಮೇಘಶ್ರೀ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ನಗರ, ಮಾಣಿಕ್ಕೋತ್, ಚಿತ್ತಾರಿ, ಮಡಿಯನ್ ಜಂಕ್ಷನ್, ವೆಳ್ಳಿಕ್ಕೋತ್, ಮಾವುಂಗಾಲ್, ಜಿಲ್ಲಾಸ್ಪತ್ರೆ, ಅರಂಗಾಡಿ, ಹೊಸಬಸ್‍ನಿಲ್ದಾಣ ಮೂಲಕ ಕಾಞಂಗಾಡು ಆರ್.ಡಿ.ಓ ಕಚೇರಿ ವಠಾರದಲ್ಲಿ ರ್ಯಾಲಿ ಸಂಪನ್ನಗೊಂಡಿತು. ವಿವಿಧ ಕೇಂದ್ರಗಳಲ್ಲಿ 'ಮೊಬೈಲ್ ಆ್ಯಪ್‍ನ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಲಾಯಿತು. ಸತೀಶನ್ ಮಡಿಕೈ ಸ್ವಾಗತಿಸಿದರು. ಜಿಲ್ಲಾ ಪಡ್ಲರ್ಸ್ ಅಧ್ಯಕ್ಷ ಬಾಬು ಮಯೂರಿ ವಂದಿಸಿದರು.