ಕಾಸರಗೋಡು: ಪಾಣತ್ತೂರು ಪರಿಯಾರಂ ಎಂಬಲ್ಲಿ ಮರ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಪಲ್ಟಿಯಾಗಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮರಗಳ ನಡುವೆ ಹೆಚ್ಚಿನ ಕಾರ್ಮಿಕರು ಸಿಲುಕಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.
ಮೃತರನ್ನು ಪಾಣತ್ತೂರು ಕುಂದುಪಳ್ಳಿ ನಿವಾಸಿಗಳಾದ ಮೋಹನನ್, ಬಾಬು, ನಾರಾಯಣನ್ ಮತ್ತು ಸುಂದರ ಎಂದು ಗುರುತಿಸಲಾಗಿದೆ.