ಕುಂಬಳೆ: "ಕೊರೋನಾ ಪಿಡುಗಿನ ಕಾಲದಲ್ಲೂ ಸಂಸ್ಥೆಯ ಫಲಾನುಭವಿಗಳು ಶಿಸ್ತಿನ ವ್ಯವಹಾರ ನಡೆಸಿದುದರಿಂದಾಗಿ ಹಿಂದಿನ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ಲಾಭದ ವಹಿವಾಟು ನಡೆಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿಯೂ ಆಡಳಿತ ಮಂಡಳಿ ಮತ್ತು ನೌಕರರ ಸಹಕಾರದೊಂದಿಗೆ ಶಿಸ್ತಿನ ವ್ಯವಹಾರ ನಡೆಸಿ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತೇವೆ" ಎಂದು ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬ್ಯಾಂಕಿನ ಕಾರ್ಯದರ್ಶಿ ಕೆ.ಶ್ರೀಕೃಷ್ಣ ಭಟ್ ವರದಿ ವಾಚಿಸಿದರು. ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಎಚ್. ಶಿವರಾಮ ಭಟ್ ಕಾರಿಂಜ ಹಳೆಮನೆ ನೂತನ ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಸಂಸ್ಥೆಯ ಸದಸ್ಯರ ಮಕ್ಕಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.
ಸಂಸ್ಥೆಯ ನಿರ್ದೇಶಕ ರಾಮ ಭಟ್. ಎಚ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಡಿ.ಕೆ.ಶ್ಯಾಮರಾಜ್ ಸ್ವಾಗತಿಸಿ, ನಿರ್ದೇಶಕಿ ಕಮಲಾಕ್ಷಿ ಭಟ್ ವಂದಿಸಿದರು.