ನವದೆಹಲಿ: ಎಂಫಿಲ್ ಮತ್ತು ಪಿಎಚ್.ಡಿ ಸಂಶೋಧನಾ ಪ್ರಬಂಧ ಸಲ್ಲಿಸಲು 2022ರ ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತಿಳಿಸಿದೆ.
ಈ ಮೊದಲು ಪ್ರಬಂಧ ಸಲ್ಲಿಸಲು 2021ರ ಡಿಸೆಂಬರ್ 31ರವರೆಗೆ ಅವಕಾಶ ಕಲ್ಪಿಸಲಾಗಿತ್ತು.
ಜೂನ್ 30 ಅಥವಾ ಅದಕ್ಕಿಂತ ಮೊದಲು ಪ್ರಬಂಧ ಸಲ್ಲಿಸಬೇಕಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಈ ವಿಸ್ತರಣೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.