ಕಾಸರಗೋಡು: ಎಂಡೋಸಲ್ಫಾನ್ ಬಾಧಿತರಾಗಿದ್ದ ಕಾಸರಗೋಡಿನ ಮತ್ತೆರಡು ಮಕ್ಕಳು ಸಾವನ್ನಪ್ಪಿದ್ದಾರೆ. ಅಂಬಲತ್ತರ ಮುಕ್ಕಿಜಿಯ ನಿವಾಸಿ ಮನು ಅವರ ಐದು ವರ್ಷದ ಪುತ್ರಿ ಅಮೆಯಾ ಮತ್ತು ಅಜಾನೂರಿನ ಮೊಯ್ದು ಅವರ 11 ವರ್ಷದ ಪುತ್ರ ಮೊಹಮ್ಮದ್ ಇಸ್ಮಾಯಿಲ್ ಮೃತಪಟ್ಟವರು.
ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಅಮೇಯ ಮೃತಪಟ್ಟಿದ್ದಾಳೆ. ಮೊಹಮ್ಮದ್ ಇಸ್ಮಾಯಿಲ್ ಕರ್ನಾಟಕದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಸಂತ್ರಸ್ತರಿಗೆ ಅಗತ್ಯ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳು ಹೆಚ್ಚುತ್ತಿರುವ ನಡುವೆಯೇ ಸಾವು ಸಂಭವಿಸಿದೆ.