ನವದೆಹಲಿ : 'ವೈರಿ ರಾಷ್ಟ್ರಗಳ ಮೇಲೆ ಪ್ರಾಬಲ್ಯ ಹೊಂದಲು ಯುದ್ಧನೌಕೆಯಲ್ಲಿ ಪ್ರಯೋಗಿಸುವ ಹೈಪರ್‌ಸಾನಿಕ್ ಕ್ಷಿಪಣಿಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲು ಆದಷ್ಟು ಶೀಘ್ರ ಒತ್ತು ನೀಡಬೇಕು' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅಭಿಪ್ರಾಯಪಟ್ಟರು.

ರಕ್ಷಣಾ ಕ್ಷೇತ್ರದ ಅನ್ವೇಷಣೆಯಲ್ಲಿ ಮುಂಚೂಣಿಯಲ್ಲಿರುವ ದೇಶಗಳು, ವೈರಿ ರಾಷ್ಟ್ರಗಳಿಗಿಂತ ಉನ್ನತ ಸ್ಥಾನದಲ್ಲಿವೆ. ಇತಿಹಾಸ ಬರೆದಿವೆ. ಹೀಗಾಗಿ, ನಾವೂ ನಮ್ಮ ಸಾಮರ್ಥ್ಯವನ್ನು ಬಲಪಡಿಸಬೇಕು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಬೇಕು ಎಂದು ಹೇಳಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಎಂದಿಗೂ ನಾಯಕನ ಸ್ಥಾನದಲ್ಲಿರಬೇಕು. ಕೆಲವೇ ರಾಷ್ಟ್ರಗಳು ಹೊಂದಿರುವ ತಂತ್ರಜ್ಞಾನಗಳು ನಮ್ಮಲ್ಲಿಯೂ ಇರಬೇಕು' ಎಂದು ಸಚಿವರು ಪ್ರತಿಪಾದಿಸಿದರು.
'ಕ್ಷಿಪಣಿ ರಕ್ಷಣಾ ತಂತ್ರಜ್ಞಾನವು ಪ್ರಸ್ತುತ ಹೆಚ್ಚು ಅನ್ವೇಷಣೆ ಕಾಣುತ್ತಿದೆ. ನಾವು ಹೈಪರ್‌ಸಾನಿಕ್ ಕ್ಷಿಪಣಿ ಅಭಿವೃದ್ಧಿಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮವಹಿಸಬೇಕು' ಎಂದು ಸಲಹೆ ಮಾಡಿದರು.
ಡಿಆರ್‌ಡಿಒ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಮತ್ತು ಸಂಶೋಧನೆ ಮಾಡಿರುವ ವಿವಿಧ ತಂತ್ರಜ್ಞಾನಗಳನ್ನು ಭಾರತೀಯ ಸೇನೆ ಬಳಸುತ್ತಿದ್ದು, ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದೆ ಎಂದು ಅಭಿಪ್ರಾಯಪಟ್ಟರು.