ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕಿರುವ ಪರಂಪರಾಗತ ಕಾನನ ಹಾದಿಯನ್ನು ಶ್ರೀ ಅಯ್ಯಪ್ಪ ವ್ರತಧಾರಿಗಳಿಗೆ ಬಿಟ್ಟುಕೊಡಲು ದೇವಸ್ವಂ ಬೋರ್ಡ್ ತಯಾರಿರುವುದಾಗಿ ಬೋರ್ಡ್ ಅಧ್ಯಕ್ಷ ಕೆ. ಅನಂತಗೋಪನ್ ತಿಳಿಸಿದ್ದಾರೆ.
ಕಾನನ ಹಾದಿಯನ್ನು ಈಗಾಗಲೇ ಶುಚೀಕರಿಸಲಾಗಿದ್ದು, ಆಸ್ಪತ್ರೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪೂರ್ತಿಗೊಳಿಸಲಾಗಿದೆ. ಸರ್ಕಾರ ಅನುಮತಿ ನೀಡಿದಲ್ಲಿ ಭಕ್ತಾದಿಗಳಿಗೆ ಪರಂಪರಾಗತ ಕಾನನ ಹಾದಿಯಲ್ಲಿ ದರ್ಶನಕ್ಕೆ ಬಿಡಲಾಗುವುದು ಎಂದೂ ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಸ್ವಾಮಿ ಅಯ್ಯಪ್ಪನ್ ರಸ್ತೆಯಲ್ಲಿ ಭಕ್ತಾದಿಗಳನ್ನು ಸನ್ನಿದಾನಕ್ಕೆ ಬಿಡಲಾಗುತ್ತಿದ್ದು, ಪರಂಪರಾಗತ ಕಾನನ ಹಾದಿಯಲ್ಲಿ ಭಕ್ತಾದಿಗಳಗೆ ಸಂಪೂರ್ಣ ನಿಯಣತ್ರಣ ಹೇರಲಾಗಿತ್ತು. ಎರುಮೇಲಿಯಿಂದ ಸನ್ನಿಧಾನಕ್ಕೆ ತೆರಳುವ ಕಾಡುಮೇಡಿನ ಹಾದಿಯನ್ನು ಪರಂಪರಾಗತ ಕಾನನ ಹಾದಿ ಎಂದು ಗುರುತಿಸಲಾಗಿದೆ. ಎರುಮೆಲಿಯಿಂದ ನಾಲ್ಕು ಕಿ.ಮೀ ದೂರದ ಪೇರೂರ್ ತೋಡಿನಿಂದ ಈ ಕಾನನ ಹಾದಿ ಆರಂಭಗೊಂಡು ಪೂಂಗಾವನಂ, ಕಾಳಗೆಟ್ಟಿ ಆಶ್ರಮ, ಅಳುದಾ ನದಿ, ಕರಿಮಲೆ ಮೂಲಕ ಪಂಪೆಗೆ ತಲುಪುತ್ತದೆ.