ಕೊಲ್ಕತ್ತಾ: ಕೊಲ್ಕತ್ತಾದಲ್ಲಿ ಮುಂದಿನ ತಿಂಗಳು ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಅವರ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೆಲ ಬಲ ಪಂಥೀಯ ಸಂಘಟನೆಗಳ ವಿರೋಧದ ನಡುವೆ ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆಯಬೇಕಿದ್ದ ಅವರ ಸ್ಟ್ಯಾಂಡ್ -ಅಫ್ ಕಾಮಿಡಿ ಶೋ ರದ್ದಾಗಿತ್ತು.
ಟ್ವೀಟರ್ ನಲ್ಲಿ ಶನಿವಾರ ಸಂಜೆ ಈ ವಿಷಯ ತಿಳಿಸಿರುವ ಫಾರೂಕಿ, ಧಂಧೋದಲ್ಲಿ ಜನವರಿ 16 ರಂದು ನಡೆಯಲಿರುವ ಎರಡು ಗಂಟೆಯ ಕಾಮಿಡಿ ಕಾರ್ಯಕ್ರಮಕ್ಕೆ ಟಿಕೆಟ್ ಬುಕ್ ಮಾಡಲು ಲಿಂಕ್ ನ್ನು ಶೇರ್ ಮಾಡಿದ್ದಾರೆ. ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆ ಬುಕ್ ಮೈ ಶೋ ಪ್ರಕಾರ, ಟಿಕೆಟ್ ಬೆಲೆ ರೂ.799 ಆಗಿದ್ದು, ವೇಗವಾಗಿ ಮಾರಾಟವಾಗುತ್ತಿವೆ.
ಹಿಂದೂ ಧರ್ಮದ ದೇವರ ಬಗ್ಗೆ ಅವಹೇಳನ ಮಾಡಿದ ಆರೋಪ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಫಾರೂಕಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನೆಲ್ಲೆ, ಅವರ ಸ್ಟ್ಯಾಂಡ್ -ಅಫ್ ಕಾಮಿಡಿ ಶೋಗೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದರು.
ಪುನೀತ್ ರಾಜ್ ಕುಮಾರ್ ಅವರ ಸಂಸ್ಥೆಗೆ ದೇಣಿಗೆ ಸಂಗ್ರಹಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ವೇದಿಕೆ ಧ್ವಂಸ ಬೆದರಿಕೆಯಿಂದ ಬೆಂಗಳೂರು ಕಾರ್ಯಕ್ರಮ ರದ್ದಾಗಿದೆ. ಅದಕ್ಕಾಗಿ 600 ಟಿಕೆಟ್ ಮಾರಾಟ ಮಾಡಲಾಗಿತ್ತು. ವೇದಿಕೆ ಮತ್ತು ವೀಕ್ಷಕರಿಗೆ ಬೆದರಿಕೆಯಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿ ತಮ್ಮ 12 ಶೋಗಳು ರದ್ದಾಗಿರುವುದಾಗಿ ಫಾರೂಕಿ ಟ್ವೀಟ್ ನಲ್ಲಿ ಹೇಳಿದ್ದರು.