ತಿರುವನಂತಪುರ: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದೆ. ನಿನ್ನೆ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ವಿಶ್ವವಿದ್ಯಾನಿಲಯಗಳ ಕುಲಪತಿ ಸ್ಥಾನದಿಂದ ಹಿಂದೆ ಸರಿಯುವ ನಿರ್ಧಾರದಲ್ಲಿ ರಾಜಿ ಇಲ್ಲ ಎಂದು ಪುನರುಚ್ಚರಿಸಿದ್ದಾರೆ. ಇನ್ನು ಮುಂದೆ ಈ ಹುದ್ದೆಯನ್ನು ವಹಿಸಿಕೊಳ್ಳುವುದಿಲ್ಲ ಎಂದು ರಾಜ್ಯಪಾಲರು ಮಾಧ್ಯಮಗಳಿಗೆ ತಿಳಿಸಿದ್ದು, ವಿಶ್ವವಿದ್ಯಾಲಯದ ವಿಷಯಗಳನ್ನು ನಿಭಾಯಿಸದಂತೆ ರಾಜಭವನದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯಪಾಲರು ಕುಲಪತಿಯಾಗುವುದು ಅಸಾಂವಿಧಾನಿಕ ಎಂದು ಆರಿಫ್ ಮೊಹಮ್ಮದ್ ಖಾನ್ ಕಿಡಿಕಾರಿದ್ದಾರೆ.
ನೈತಿಕತೆ ಮತ್ತು ಕಾನೂನಿಗೆ ಹೊಂದಿಕೆಯಾಗದ ಕೆಲಸವನ್ನು ಮಾಡಬೇಕಾಗಿತ್ತು, ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಆದರೆ ಇನ್ನು ತಪ್ಪುಗಳನ್ನು ಮತ್ತಷ್ಟು ಮಾಡಲಾಗದು. ವಿವಾದದ ಆರಂಭದಿಂದಲೇ ರಾಜ್ಯಪಾಲರು ತಳೆದ ನಿರ್ಧಾರವನ್ನು ಇದೀಗ ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ತಮ್ಮ ಪ್ರಮಾಣ ವಚನವನ್ನು ಉಲ್ಲಂಘಿಸಲಾರೆ ಎಂದು ರಾಜ್ಯಪಾಲರು ಪುನರುಚ್ಚರಿಸಿದ್ದಾರೆ.
ಕಣ್ಣೂರು ವಿಸಿ ಮರುನೇಮಕ ವಿವಾದ ತಾರಕಕ್ಕೇರಿದ್ದು, ರಾಜ್ಯಪಾಲರು ಕುಲಪತಿ ಹುದ್ದೆಯಿಂದ ಕೆಳಗಿಳಿಯುವ ಹಂತಕ್ಕೆ ತಲುಪಿದ್ದಾರೆ. ಮೊದಲಿನಿಂದಲೂ ರಾಜ್ಯಪಾಲರಿಗೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದ್ದರು. ರಾಜ್ಯಪಾಲರ ಸರ್ಕಾರದ ವಿರುದ್ದದ ಸಮರ ತೀವ್ರಗೊಂಡಂತೆ, ಸಚಿವರ ಪತ್ನಿಯರು ಮತ್ತು ಸಿಪಿಎಂ ನಾಯಕರ ಪತ್ನಿಯರ ನೇಮಕಾತಿಗಳು ಚರ್ಚೆಯ ಸಕ್ರಿಯ ವಿಷಯವಾಯಿತು.
ಉನ್ನತ ಶಿಕ್ಷಣ ಕ್ಷೇತ್ರ ತಳಮಟ್ಟದ ರಾಜಕಾರಣಿಗಳ ಹಿಡಿತದಲ್ಲಿದೆ ಎಂಬ ಟೀಕೆಗಳು ಹೆಚ್ಚುತ್ತಿರುವ ನಡುವೆಯೇ ರಾಜ್ಯ ಸರ್ಕಾರದÀ ವಿರುದ್ದ ರಾಜ್ಯಪಾಲರ ಗಟ್ಟಿ ನಿರ್ಧಾರಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.