ಬದಿಯಡ್ಕ: ದೇಶದ ಎಲ್ಲಾ ಮೂರು ಸೇನಾ ಪಡೆಗಳನ್ನು ಸಮರ್ಥವಾಗಿ ನಿಭಾಯಿಸಿದ, ತನ್ನ ದಿಟ್ಟ ನಿಲುವಿನಿಂದಲೇ ಪಾಕಿಸ್ತಾನದಂತಹ ಉಗ್ರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿ ಭಾರತೀಯ ಸೇನೆಗೆ ಸದಾ ಬೆಂಗಾವಲಾಗಿ ನಿಂತು ದೇಶದ ಸೇನೆಯನ್ನು ಮುನ್ನಡೆಸುತ್ತಿದ್ದ ಸೇನಾ ಮುಖ್ಯಸ್ಥ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಜನರಲ್ ಬಿಪಿನ್ ರಾವತ್ ಅವರಿಗೆ ಪುಷ್ಪಾರ್ಚನೆ ಕಾರ್ಯಕ್ರಮ ಮಲ್ಲಡ್ಕ 17ನೆ ವಾರ್ಡ್ ಸಮಿತಿ ವತಿಯಿಂದ ಜರಗಿತು.
ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಭಟ್ ಚುಳ್ಳಿಕ್ಕಾನ ಹಾಗೂ ರಾಮಕೃಷ್ಣ ಹೆಬ್ಬಾರ್ ಇವರು ಅಮರ ಯೋಧರ ಕುರಿತು ಮಾತನಾಡಿದರು. ಬಾಲಕೃಷ್ಣ ಮಲ್ಲಡ್ಕ, ಗಣೇಶ್ ಕೃಷ್ಣ ಆಳಕ್ಕೆ, ಬಾಲಸುಬ್ರಹ್ಮಣ್ಯ ಭಟ್, ಶ್ಯಾಮ್ ಭಟ್ ಮಲ್ಲಡ್ಕ, ರಾಮಕೃಷ್ಣ ಭಟ್, ವಿಷ್ಣು ಶರ್ಮಾ ನೂಜೀಲ, ಶ್ರೀಕೃಷ್ಣ ಖಂಡಿಗೆ,ಸುಜಿತ್ ಬೇಳ, ಸತೀಶ್ ಬೇಳ ಮತ್ತಿತರರು ಉಪಸ್ಥಿತರಿದ್ದರು.
ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಮಲ್ಲಡ್ಕ ಸ್ವಾಗತಿಸಿ, ಪಂಚಾಯತಿ ಸದಸ್ಯೆ ಸ್ವಪ್ನ ವಂದಿಸಿದರು.