ಪಾಲಕ್ಕಾಡ್; ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಕೇರಳದ ಯೋಧ ಪ್ರದೀಪ್ ಅವರಿಗೆ ಸಾವಿರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಪಾಲಕ್ಕಾಡ್ ಚಂದ್ರನಗರ ತಲುಪಿದ ಶೋಕಾಚರಣೆಯಲ್ಲಿ ಸ್ಥಳೀಯರು ಸೇರಿದಂತೆ ಅಪಾರ ಜನಸ್ತೋಮ ಪಾಲ್ಗೊಂಡಿತ್ತು.
ಪಾಲಕ್ಕಾಡ್ ಬಿಜೆಪಿ ಮುನ್ಸಿಪಲ್ ಕೌನ್ಸಿಲರ್ ಸೇರಿದಂತೆ ಹಲವರು ಚಂದ್ರನಗರದಲ್ಲಿ ಪ್ರದೀಪ್ ಅವರ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿದರು. ಚಂದ್ರನಗರದ ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ನೂರಾರು ಜನರು ಅಂತಿಮ ನಮನ ಸಲ್ಲಿಸಿದರು. ಪಾಲಕ್ಕಾಡ್ ಮುನ್ಸಿಪಲ್ ಕಾಪೆರ್Çರೇಷನ್ ಅಧ್ಯಕ್ಷೆ ಪ್ರಿಯಾ ಅಜಯನ್ ಪಕ್ಷದ ರಾಜ್ಯ ಖಜಾಂಚಿಯೂ ಆಗಿದ್ದಾರೆ. ಚಂದ್ರನಗರದಲ್ಲಿ ನಡೆದ ಶೋಕಾಚರಣೆಯಲ್ಲಿ ಕೃಷ್ಣದಾಸ್ ಸೇರಿದಂತೆ ಬಿಜೆಪಿ ಮುಖಂಡರು ಪ್ರದೀಪ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಪಾಲಕ್ಕಾಡಿನ ಪುತ್ತೂರಿಗೆ ಹೋಗುವ ದಾರಿಯಲ್ಲಿ ಪಾಲಕ್ಕಾಡ್ ನಗರದಲ್ಲಿ ರಾಷ್ಟ್ರಧ್ವಜ ಮತ್ತು ಹೂವುಗಳನ್ನು ಕೈಯಲ್ಲಿ ಹಿಡಿದುಕೊಂಡು ಅನೇಕರು ನಿಂತಿದ್ದರು. ದಾರಿಯುದ್ದಕ್ಕೂ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಜನಸಾಗರವೇ ಕಾದು ನಿಂತಿತ್ತು. ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳೊಂದಿಗೆ ಪ್ರದೀಪ್ ಅವರ ದೇಹ ದರ್ಶನಕ್ಕೆ ಕಾಯುತ್ತಿದ್ದ ದೃಶ್ಯ ಭಾವುಕವಾಗಿತ್ತು.
ಕೇಂದ್ರ ಸಚಿವ ವಿ. ಮುರಳೀಧರನ್ ಅವರು ದೆಹಲಿಯಿಂದ ಪಾರ್ಥಿವ ಶರೀರದೊಂದಿಗೆ ಬಂದಿದ್ದರು. ಸಚಿವರುಗಳಾದ ಕೆ. ರಾಧಾಕೃಷ್ಣನ್, ಕೆ. ರಾಜನ್, ಕೆ. ಕೃಷ್ಣನ್‍ಕುಟ್ಟಿ ಮತ್ತು ಆರ್ ಬಿಂದು ಅವರೊಂದಿಗೆ ಪಾಲಕ್ಕಾಡ್ ಜಿಲ್ಲಾಧಿಕಾರಿ ಮೃಣ್ಮಯಿ ಜೋಶಿ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಕೃಷ್ಣಕುಮಾರ್ ಮತ್ತಿತರರು ಮೃತದೇಹ ಆಗಮಿಸಿದಾಗ ವಾಳಯಾರ್‍ಗೆ ಬಂದಿದ್ದರು.