ಕೊಲ್ಲಂ: ಕೆಎಸ್‌ಆರ್‌ಟಿಸಿ ವೇತನ ನೀಡದ ಹಿನ್ನೆಲೆಯಲ್ಲಿ ನೌಕರರು ಕೂಲಿ ಕೆಲಸಕ್ಕೆ ರಜೆ ನೀಡುವಂತೆ ಒತ್ತಾಯಿಸಿರುವರು. ಪುನಲೂರು ಡಿಪೋದ ನೌಕರರು ವೇತನ ನೀಡದ ಕಾರಣ ಕೂಲಿ ಕೆಲಸಕ್ಕೆ ತೆರಳಲು ರಜೆ ನೀಡುವಂತೆ ಎಟಿಒಗೆ ಪತ್ರ ಬರೆದಿದ್ದಾರೆ.
ದಿನನಿತ್ಯದ ಖರ್ಚು ಕೂಡ ಕೈಗೆಟುಕಲಾಗದ ಸ್ಥಿತಿ ಇದೆ. ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ. ಹೀಗಾಗಿ ಕುಟುಂಬ ನಿರ್ವಹಣೆಗೆ ಕೂಲಿ ಕೆಲಸಕ್ಕೆ ತೆರಳಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ನೌಕರರು. ನವಂಬರ್ ತಿಂಗಳ ವೇತನ ಡಿಸೆಂಬರ್ ತಿಂಗಳ ಎರಡೂವರೆ ವಾರ ಕಳೆದರೂ ವೇತನ ಸಿಗದ ಹಿನ್ನೆಲೆಯಲ್ಲಿ ನ.30ರಿಂದ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.