ತಿರುವನಂತಪುರ: ಕೊಟ್ಟೂರು ದೇವಸ್ಥಾನದ ಮೇಲೆ ಸಮಾಜ ವಿರೋಧಿಗಳು ದಾಳಿ ನಡೆಸಿದ್ದಾರೆ. ಅರಣ್ಯವಾಸಿಗಳ ದೇವಾಲಯವಾದ ಮುಂಡನಿಮದನ್ ತಂಬುರಾನ್ ದೇವಸ್ಥಾನದಲ್ಲಿ ದಾಳಿ ನಡೆದಿದೆ. ದೇವಸ್ಥಾನದ ನೌಕರ ರಶೀದ ಜತೆಗಿನ ಸಮಸ್ಯೆಯಿಂದ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ ಈ ದಾಳಿ ನಡೆದಿದೆ. ದಾಳಿಕೋರರು ದೇವಸ್ಥಾನದ ಬಾಗಿಲು ಒಡೆದು, ಪೊಂಗಾಲದ ಒಲೆಗಳನ್ನು ಒಡೆದು ಹಾಕಿದ್ದಾರೆ. ಪೂಜೆಗೆಂದು ಇಟ್ಟಿದ್ದ ವಸ್ತುಗಳೂ ನಾಶವಾಗಿವೆ. ನಂತರ ರಶೀದ್ ಅವರನ್ನು ಅವರ ಕಚೇರಿಯಿಂದ ಹೊತ್ತೊಯ್ದು ಥಳಿಸಲಾಗಿದೆ. ದೇವಸ್ಥಾನದ ಉದ್ಯೋಗಿ ಮಾಧವಿ ಅವರ ಮೇಲೂ ಗುಂಪು ಹಲ್ಲೆ ನಡೆಸಿದೆ. ಆದರೆ ಅವರು ಓಡಿ ತಪ್ಪಿಸಿಕೊಂಡರು. ಕಲ್ಲುಗಳಿಂದ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.
ರಶೀದ್ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡ ರಶೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.