HEALTH TIPS

ರಾಷ್ಟ್ರೀಯ ಯುವಜನೋತ್ಸವ: ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳ ಆಹ್ವಾನ

                                                  

                  ಕಾಸರಗೋಡು: ನೆಹರೂ ಯುವಕೇಂದ್ರ ವತಿಯಿಂದ ಜ. 12ರಿಂದ 16ರ ವರೆಗೆ ಪುದುಚ್ಚೇರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ 15ರಿಂದ 29ವರ್ಷದೊಳಗಿನ ಪ್ರಾಯದವರಿಗಾಗಿ ಪ್ರಬಂಧ ಸ್ಪರ್ಧೆ ನಡೆಯಲಿರುವುದು.

              '2047ರಲ್ಲಿ ನನ್ನ ಕನಸಿನ ಭಾರತ' ಹಾಗೂ 'ಆಜಾದಿ ಕಾ ಅಮೃತ್ ಮಹೋತ್ಸವ್: ಗುರುತಿಸಲ್ಪಡದ ಸ್ವಾತಂತ್ರ್ಯ ಹೋರಾಟಗಾರರು' ಎಂಬ ವಿಷಯಗಳ ಬಗ್ಗೆ ಸ್ಪರ್ಧೆ ನಡೆಯಲಿದ್ದು, ಯಾವುದಾದರೂ ಒಂದು ವಿಷಯದ ಬಗ್ಗೆ 300ಪದಗಳಿಗೆ ಮೀರದಂತೆ ಪ್ರಬಂಧ ರಚಿಸಬೇಕು. ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪ್ರಬಂಧ ರಚಿಸಿ, ಡಿ. 22ರ ಮೊದಲು ನೆಹರೂ ಯುವಕೇಂದ್ರ ಯೂತ್ ಕೋರ್ಡಿನೇಟರ್‍ಗೆ(ಇ-ಮೈಲ್: ಟಿಥಿvಞಚಿsಚಿಡಿgoಜ@gmಚಿiಟ.ಛಿom) ತಲುಪಿಸಬೇಕಾಗಿದೆ. ಸ್ಪರ್ಧಿಯ ಹೆಸರು, ಹುಟ್ಟಿದ ದಿನಾಂಕ, ಪ್ರಾಯ, ಬ್ಲಾಕ್, ಜಿಲ್ಲೆ, ಪೂರ್ಣ ವಿಳಾಸ, ಮೊಬೈಲ್, ಇ-ಮೈಲ್ ಮುಂತಾದ ವಿವಿರಗಳನ್ನು ಪ್ರತ್ಯೇಕ ಹಾಳೆಯಲ್ಲಿ ತಯಾರಿಸಿ ಪ್ರಬಂಧದೊಂದಿಗೆ ಕಳುಹಿಸಬೇಕು. ಆಯ್ಕೆಯಾದ ಪ್ರಬಂಧಗಳನ್ನು ರಾಷ್ಟ್ರೀಯ ಯುವಜನೋತ್ಸವ ವೇದಿಕೆಯಲ್ಲಿ ಪ್ರದರ್ಶಿಸಲಾಗುವುದು. ವಿಜೇತರಿಗೆ ಸರ್ಟಿಫಿಕೇಟ್ ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನೆಹರೂ ಯುವಕೇಂದ್ರ ಜಿಲ್ಲಾ ಕಚೇರಿ(04994255144, 7736426247)ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries