ತಿರುವನಂತಪುರ: ಪತ್ತನಂತಿಟ್ಟದ ಮಲ್ಲಪ್ಪಲ್ಲಿಯಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ವಶಕ್ಕೆ ಪಡೆದು ಬಾಬರಿ ಬ್ಯಾಡ್ಜ್ ನೀಡಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ವಕ್ತಾರ ಸಂದೀಪ್ ವಾರಿಯರ್ ಪ್ರತಿಕ್ರಿಯಿಸಿದ್ದಾರೆ. ‘ನಾನು ಬಾಬ್ರಿ’ ಎಂಬ ಬ್ಯಾಡ್ಜ್ ಹಾಕಿಕೊಂಡು ಮಕ್ಕಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಮೂವರು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ಬಿಜೆಪಿ ವಕ್ತಾರರು ಈ ಪ್ರತಿಕ್ರಿಯೆ ನೀಡಿದ್ದಾರೆ. ಭಾರತವು ಟರ್ಕಿ ಆಗುವುದಿಲ್ಲ ಎಂದು ಸೂಚಿಸಿದರು.
ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ನೀಡಿದ್ದು, ಮಂದಿರ ಮತ್ತು ಮಸೀದಿ ನಿರ್ಮಾಣ ಏಕಕಾಲಕ್ಕೆ ಆರಂಭವಾಗಿದೆ. ದೇಶ ಬಹಳ ದೂರ ಸಾಗಿದೆ. ಈ ಹಿಂದೆ ಕೇರಳದಲ್ಲಿ ಮುಸ್ಲಿಂ ಸಂಘಟನೆಗಳು ಡಿಸೆಂಬರ್ 6 ರಂದು ಹರತಾಳ ನಡೆಸುತ್ತಿದ್ದವು, ಆದರೆ ಈಗ ಯಾರೂ ಕ್ಯಾರೇ ಎನ್ನುತ್ತಿಲ್ಲ. ಈಗ ಪಾಪ್ಯುಲರ್ ಫ್ರಂಟ್ ಧಾರ್ಮಿಕ ಉಗ್ರರು ಅನ್ಯ ಧರ್ಮೀಯರ ಎದೆಗೆ ಚೂರಿ ಇರಿದು ಪ್ರಚೋದನೆ ನೀಡಿದ್ದಾರೆ ಎಂದು ಸಂದೀಪ್ ವಾರಿಯರ್ ಹೇಳಿದ್ದಾರೆ. ಕೇರಳದಲ್ಲಿ ಪಾಪ್ಯುಲರ್ ಫ್ರಂಟ್‍ನ ನಿಜವಾದ ಫ್ರಂಟ್ (ಸ್ನೇಹಿತ) ಸಿಪಿಎಂ ಎಂದು ಅವರು ಸೂಚಿಸಿದರು. ದೂರು ನೀಡಿದರೂ ಪ್ರಯೋಜನವಾಗುವುದಿಲ್ಲ, ಪಾಪ್ಯುಲರ್ ಫ್ರಂಟ್ ವಿರುದ್ಧ ಪ್ರಕರಣ ದಾಖಲಿಸದೆ ಎಡ ಸರಕಾರ ರಕ್ಷಣೆ ಮಾಡುತ್ತಿದೆ ಎಂದು ಸಂದೀಪ್ ವಾರಿಯರ್ ಹೇಳಿದರು.
ಕೊಡಿಯೇರಿ ಮನೆಗೆ ದೌಡಾಯಿಸಿದ ರಾಜ್ಯ ಮಕ್ಕಳ ಹಕ್ಕು ಆಯೋಗವೂ ಇಂದು ಕಾಣುತ್ತಿಲ್ಲ. ಕೇಂದ್ರ ಆಯೋಗ ನೇರವಾಗಿ ಭಾಗಿಯಾಗಿದೆ. ಪಾಪ್ಯುಲರ್ ಫ್ರಂಟ್ ಬಗ್ಗೆಯೂ ಅದೇ ಹೇಳಬಹುದು. ಭಾರತವು ಟರ್ಕಿಯಾಗಲು ಸಾಧ್ಯವಿಲ್ಲ ಎಂದು ಸಂದೀಪ್ ವಾರಿಯರ್ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ.