ಕೊಚ್ಚಿ: ಬಾಸಿಲ್ ಜೋಸೆಫ್ ನಿರ್ದೇಶನದ ಮತ್ತು ಟೊವಿನೋ ಥಾಮಸ್ ಅಭಿನಯದ ಸೂಪರ್ ಹೀರೋ ಸಿನಿಮಾ 'ಮಿನ್ನಲ್ ಮುರಳಿ' ನೆಟ್‌ಫ್ಲಿಕ್ಸ್‌ನಲ್ಲಿ ಯಾವಾಗ ಬರಲಿದೆ ಎಂದು ಚಿತ್ರ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಿಡುಗಡೆಗೆ ಇನ್ನು ಒಂದು ದಿನ ಬಾಕಿ ಇರುವಾಗ ಟ್ವಿಟ್ಟರ್ ಮಿನ್ನಲ್ ಮುರಳಿಗಾಗಿ ವಿಶೇಷ ಎಮೋಜಿಯನ್ನು ಸಿದ್ಧಪಡಿಸಿದೆ.
ಭಾರತದ ಅನೇಕ ಸೂಪರ್ ಹೀರೋ ಚಿತ್ರಗಳು ಈ ಹಿಂದೆ ಎಮೋಜಿಗಳನ್ನು ಪಡೆದಿದ್ದರೂ, ಮಲಯಾಳಂ ಚಿತ್ರವೊಂದು ಇಂತಹ ಪ್ರಚಾರವನ್ನು ಪಡೆದಿರುವುದು ಇದೇ ಮೊದಲು. ಇದೀಗ ಟ್ವಿಟರ್‌ನಲ್ಲಿ 'ಮಿನ್ನಲ್ ಮುರಳಿ' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಎಮೋಜಿ ಲಭ್ಯವಾಗಲಿದೆ. ಎಮೋಜಿಯು ಟೋವಿನೋ ನಿರ್ವಹಿಸಿದ ನಾಯಕನ ಚಿತ್ರವನ್ನು ತೋರಿಸುತ್ತದೆ.