ಪತ್ತನಂತಿಟ್ಟ :ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ಅನುಕೂಲಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿಯು 'ಗೂಗಲ್ ಪೇ' ಮೂಲಕ ಕಾಣಿಕೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಶಬರಿಮಲೆ ದೇವಸ್ಥಾನಕ್ಕೆ ಗೂಗಲ್ ಪೇ ಮೂಲಕ ಕಾಣಿಕೆ ಸಲ್ಲಿಸಲು ಅವಕಾಶ
0
ಡಿಸೆಂಬರ್ 02, 2021
Tags
ಪತ್ತನಂತಿಟ್ಟ :ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ಅನುಕೂಲಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿಯು 'ಗೂಗಲ್ ಪೇ' ಮೂಲಕ ಕಾಣಿಕೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಹಿಂದಿನ ವರ್ಷಗಳಂತೆ ಈ ವರ್ಷವೂ ಟಿಡಿಬಿ ತನ್ನ ಅಧಿಕೃತ ಧನಲಕ್ಷ್ಮಿ ಬ್ಯಾಂಕ್‌ನ ಸಹಯೋಗದಲ್ಲಿ ಡಿಜಿಟಲ್ ಪಾವತಿಯ ಈ ವ್ಯವಸ್ಥೆ ಮಾಡಿದೆ.
ಇಲ್ಲಿಯವರೆಗೆ ವಿವಿಧೆಡೆ 22 ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗಿದೆ. ಶಬರಿಮಲೆ ಯಾತ್ರೆಯ ಮಾರ್ಗದ ವಿವಿಧ ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ಕ್ಯೂಆರ್ ಕೋಡ್‌ಗಳನ್ನು ಪ್ರದರ್ಶಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಡಿಬಿ ಕಾರ್ಯನಿರ್ವಾಹಕ ಅಧಿಕಾರಿ ವಿ. ಕೃಷ್ಣಕುಮಾರ್ ವಾರಿಯರ್ ಹೇಳಿದ್ದಾರೆ.