ಮಂಜೇಶ್ವರ: ಡಿಸೆಂಬರ್ 3 ರಂದು ವಿಶ್ವ ವಿಶೇಷ ಚೇತನರ ದಿನದ ಅಂಗವಾಗಿ ಮಂಜೇಶ್ವರ ಬಿ.ಆರ್.ಸಿ ಮಟ್ಟದ "ಮಗುವಿನಂದಿಗೆ ಒಂದು ದಿನ" ಈ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಳಿಂಜದ ಶಾಲೆಯ ಮಗುವಾದ ಆಲಿಯಾ ನಾಜ್‍ಳ ಮನೆಯಲ್ಲಿ ಜರಗಿತು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಖದೀಜತ್ ರಿಸಾನ, ವಿದ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ, ವಾರ್ಡ್ ಸದಸ್ಯ ಶರೀಫ್, ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ, ಹಿರಿಯ ಶಿಕ್ಷಕಿ ಪುಷ್ಪಲತಾ ಮತ್ತು ಮಂಜೇಶ್ವರ ಬಿ.ಆರ್.ಸಿ ಯ ಯೋಜನಾ ಸಂಯೋಜಕ ವಿಜಯಕುಮಾರ್ ವಿಶೇಷ ಮಕ್ಕಳ ಶಿಕ್ಷಕಿಯರಾದ ರೀಮ ಮೊಂತೆರೊ, ರೂಪ ಡಿಸೋಜ, ಬಿಂದ್ಯಾ, ಅನಿತ ವೇಗಸ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು. ಮಗುವಿಗೆ ಆಹಾರ ಧಾನ್ಯಗಳ ಕಿಟ್ ಹಣ್ಣುಹಂಪಲು ಹೊದಿಕೆಗಳನ್ನು ನೀಡಲಾಯಿತು.