ಮುಂಬೈ: ಮುಂಬೈನಲ್ಲಿ ವರ್ಷಾಂತ್ಯದಲ್ಲಿ (ಡಿ.31) ಭಯೋತ್ಪಾದನಾ ದಾಳಿ ನಡೆಸಲು ಖಲಿಸ್ತಾನ ಉಗ್ರರು ಸಂಚು ರೂಪಿಸಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.
ಮುಂಬೈ: ಮುಂಬೈನಲ್ಲಿ ವರ್ಷಾಂತ್ಯದಲ್ಲಿ (ಡಿ.31) ಭಯೋತ್ಪಾದನಾ ದಾಳಿ ನಡೆಸಲು ಖಲಿಸ್ತಾನ ಉಗ್ರರು ಸಂಚು ರೂಪಿಸಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ಟ್ವೀಟಿಸಿದೆ.
ವಾಣಿಜ್ಯ ನಗರಿಯಲ್ಲಿ ದಾಳಿ ಭೀತಿ ಹಿನ್ನೆಲೆಯಲ್ಲಿ ಪ್ರಮುಖ ನಿಲ್ದಾಣಗಳಾದ ದಾದರ್, ಬಾಂದ್ರಾ, ಚರ್ಚ್‌ಗೇಟ್, ಸಿಎಸ್‌ಎಂಟಿ, ಕುರ್ಲಾ ಮತ್ತು ಇತರೆ ನಿಲ್ದಾಣಗಳಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ (ಮುಂಬೈ ರೈಲ್ವೆ) ತಿಳಿಸಿದ್ದಾರೆ.