ಮುಳ್ಳೇರಿಯ: ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿರುವ ಕೆ.ಎಸ್.ಟಿ.ಎ. ಕಾಸರಗೋಡು ಉಪಜಿಲ್ಲಾ ಸಮ್ಮೇಳನದ ಪೂರ್ವಭಾವೀ ಪ್ರಚಾರದ ಅಂಗವಾಗಿ ಹಮ್ಮಿಕೊಳ್ಳಲಾದ ಬೈಕ್ ರ್ಯಾಲಿ ಸಂಚಲನ ಮೂಡಿಸಿತು. ಕುಟ್ಟಿಕೋಲ್‍ನಿಂದ ಆರಂಭವಾದ ರ್ಯಾಲಿಗೆ ಸಿಪಿಎಂ ಬೇಡಗಂ ಕ್ಷೇತ್ರ ಕಾರ್ಯದರ್ಶಿ ಸಿ.ಬಾಲನ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಸಮಿತಿ ಸದಸ್ಯ ಸಿ.ಪ್ರಶಾಂತ್, ಉಪಜಿಲ್ಲಾ ಕಾರ್ಯದರ್ಶಿ ಸಿ.ಕೆ.ಜಗದೀಶ್, ಎ.ಮಧುಸೂದನನ್, ಎಂ.ವಿ.ವೇಣುಗೋಪಾಲನ್, ಕೆ.ಪುಷ್ಪರಾಜನ್, ಎ.ರತೀಶ್ ಕುಮಾರ್, ಸಿ.ಕೃಷ್ಣನ್, ಕೆ.ಅಶೋಕನ್, ಅನೂಪ್ ಪೆರಿಯಾಲ್ ನೇತೃತ್ವ ವಹಿಸಿದ್ದರು. ಬೈಕ್ ರ್ಯಾಲಿ ಕುಂಡಂಗುಳಿಯಲ್ಲಿ ಕೊನೆಗೊಂಡಿತು. ಸಮ್ಮೇಳನವನ್ನು ಜಿಲ್ಲಾ ಕಾರ್ಯದರ್ಶಿ ಪಿ.ದಿಲೀಪ್ ಕುಮಾರ್ ಉದ್ಘಾಟಿಸುವರು. ಶನಿವಾರ ಸಂಜೆ 4 ಗಂಟೆಗೆ ಕುಂಡಂಗುಳಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ರಾಜ್ಯ ಸಮಿತಿ ಸದಸ್ಯ ಕೆ.ಹರಿದಾಸ್ ಉದ್ಘಾಟಿಸುವರು.