ಮಧೂರು: ಕಾಸರಗೋಡು ಸೂರ್ಲು ಗುಡ್ಡೆಮನೆ ಮೂಕಾಂಬಿಕಾ ಸ್ಪೋಟ್ರ್ಸ್ ಕ್ಲಬ್ ಇದರ ತುರ್ತು ಸಭೆ ಉಪಾಧ್ಯಕ್ಷರ ನೇತೃತ್ವದಲ್ಲಿ ಗುಡ್ಡೆ ಮನೆಯಲ್ಲಿ ಜರಗಿತು. ಇತ್ತೀಚಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಅಸ್ತಂಗತರಾದ ಮೂರು ಸೇನೆಗಳ ಮುಖ್ಯಸ್ತರಾದ ಬಿಪಿನ್ ಲಕ್ಷ್ಮಣ ರಾವತ್, ಅವರ ಪತ್ನಿ ಹಾಗೂ ಇತರ ಪ್ರಮುಖ ಸೈನಿಕರಿಗೆ ಸಂಘದ ವತಿಯಿಂದ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.. ಕ್ಲಬ್ ನ ಕೋಶಾಧಿಕಾರಿ ಸುರೇಶ್ ಸೂರ್ಲು ಗುಡ್ಡೆಮನೆ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ಕ್ಲಬ್ ನ ಜೊತೆ ಕಾರ್ಯದರ್ಶಿ ಹರೀಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕಿರಣ್ ವಂದಿಸಿದರು.