ಭೋಪಾಲ: ವಿವಾಹ ಸಮಾರಂಭವೊಂದಕ್ಕೆ ಪ್ರವೇಶಿಸಿದ ಸಂಘಪರಿವಾರದ ಕಾರ್ಯಕರ್ತರು ವ್ಯಕ್ತಿಯೋರ್ವನನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ರವಿವಾರ ಮಧ್ಯಪ್ರದೇಶದಲ್ಲಿ ನಡೆದಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಮೃತಪಟ್ಟ ವ್ಯಕ್ತಿಯನ್ನು ಮಾಜಿ ಸರಪಂಚ ದೇವಿಲಾಲ್ ಮೀನಾ ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಸಂಜೆ ಮೂರು ಮಂದಿಯನ್ನು ಬಂಧಿಸಲಾಗಿದೆ. ಇವರು ಸಂಘ ಪರಿವಾರಕ್ಕೆ ಸೇರಿದವರು ಎಂಬುದನ್ನು ಎಂದು ಪೊಲೀಸರು ಇನ್ನಷ್ಟೇ ಖಚಿತಪಡಿಸಬೇಕಿದೆ. ಸ್ವಘೋಷಿತ ದೇವ ಮಾನವ ರಾಮ್‌ಪಾಲ್ ಮಂದಸೌರ್‌ನಲ್ಲಿ ಆಯೋಜಿಸಿದ್ದ ವಿವಾಹ ಸಮಾರಂಭಕ್ಕೆ ನಿನ್ನೆ ಸುಮಾರು 2 ಗಂಟೆಗೆ ಸಂಘ ಪರಿವಾರದ ಕಾರ್ಯಕರ್ತರು ''ಜೈ ಶ್ರೀರಾಮ್'' ಎಂದು ಘೋಷಣೆಗಳನ್ನು ಕೂಗುತ್ತಾ ಪ್ರವೇಶಿಸಿದರು. ದೊಣ್ಣೆ ಹಾಗೂ ಬಿದಿರುಗಳನ್ನು ಹಿಡಿದುಕೊಂಡು ಬಂದ ಕಾರ್ಯಕರ್ತರು ಪ್ರವೇಶಿಸುತ್ತಿದ್ದಂತೆ ಕೆಲವು ಅತಿಥಿಗಳು ಪರಾರಿಯಾದರು. ಅಲ್ಲಿ. ಆತಂಕದ ವಾತಾವರಣ ನಿರ್ಮಾಣವಾಯಿತು. ಈ ಗದ್ದಲದ ನಡುವೆ ಕಾರ್ಯಕರ್ತರು ಮಾಜಿ ಸರಪಂಚ ದೇವಿಲಾಲ್ ಮೀನಾ ಅವರ ಮೇಲೆ ಗುಂಡು ಹಾರಿಸಿದರು. ಅವರನ್ನು ರಾಜಸ್ಥಾನದ ಕೋಟಾದಲ್ಲಿರುವ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು. ಆದರೆ, ಅವರು ಅನಂತರ ಮೃತಪಟ್ಟರು. ಗುರುತಿಸಲಾದ ಹಾಗೂ ಗುರುತಿಸದ 11 ಮಂದಿಯ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.