ಕಾಸರಗೋಡು: ಜಿಲ್ಲಾಮಟ್ಟದ ಸಶಸ್ತ್ರ ಸೇನಾ ಧ್ವಜ ದಿನಾಚರಣೆ ಮತ್ತು ಸಶಸ್ತ್ರ ಸೇನಾ ಧ್ವಜ ಮಾರಾಟ ಕಾರ್ಯಕ್ರಮ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಶಾಸಕ ಎನ್.ಎ ಮೆಲ್ಲಿಕುನ್ನು ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾರ್ಗಿಲ್ ಸ್ತೂಪ ಹಾಗೂ ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನಡೆಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸೈನಿಕ ಬೋರ್ಡ್ ಉಪಾಧ್ಯಕ್ಷ ಬ್ರಿಗೇಡಿಯರ್ ಟಿ.ಸಿ ಅಬ್ರಹಾಂ ಧ್ವಜದಿನಾಚರಣೆ ಸಂದೇಶ ನೀಡಿದರು.
ಜಿಲ್ಲಾ ಶಿಕ್ಷಣ ಉಪ ನಿರ್ದೇಶಕಿ ಕೆ.ವಿ ಪುಷ್ಪಾ, ಜಿಲ್ಲಾ ರಿಜಿಸ್ಟ್ರಾರ್ ಎಂ. ಹಾಕಿಂ, ಜಿಲ್ಲಾ ಲೀಡ್ ಬ್ಯಾಂಕ್ ಪ್ರಬಂಧಕ ಎನ್. ಕಣ್ಣನ್, ಕೆಎಸ್‍ಇಎಸ್‍ಎಲ್ ಜಿಲ್ಲಾಧಯಕ್ಷ ಕೆ. ನಾರಾಯಣನ್ ನಾಯರ್, ಎಂ.ಕೃಷ್ಣನ್ ನಾಯರ್, ಪಿ.ರಾಜೀವನ್, ಲೆಫ್ಟಿನೆಂಟ್ ಕರ್ನಲ್ ಎಂ.ಕೆ ಕಮಲಾಕ್ಷನ್ ಉಪಸ್ಥಿತರಿದ್ದರು.