ಪ್ಯಾರಿಸ್: ಕಣ್ಣೂರಿನ ಅಜೀಶ್ ಪುತಿಯದತ್ ಅವರು ಪ್ಯಾರಿಸ್ ಇಂಟರ್ ನ್ಯಾಷನಲ್ ಸ್ಟ್ರೀಟ್ ಪೋಟೋಗ್ರಫಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2021 ರ ಪ್ಯಾರಿಸ್ ಇಂಟನ್ರ್ಯಾಷನಲ್ ಸ್ಟ್ರೀಟ್ ಪೋಟೋಗ್ರಫಿ ಸ್ಪರ್ಧೆಯಲ್ಲಿ ಅಜೀಶ್ ಸ್ಟ್ರೀಟ್ ಮತ್ತು ಆರ್ಕಿಟೆಕ್ಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಅಜೀಶ್ ಅವರ ಸಿಟಿ ಆನ್ ಶೋಲ್ಡರ್ ಪ್ರಶಸ್ತಿ ಗಳಿಸಿತು. ಅಕ್ಟೋಬರ್‍ನಲ್ಲಿ ಸ್ಪರ್ಧೆ ನಡೆದಿತ್ತು.
2022ರ ಫಿಫಾ ವಿಶ್ವಕಪ್‍ಗೆ ಆತಿಥ್ಯ ವಹಿಸಲಿರುವ ಕತಾರ್‍ನ ರಾಜಧಾನಿ ದೋಹಾದ ಕಾರ್ನಿಚೆಯಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ. ಮೊದಲ ನೋಟದಲ್ಲಿ, ಚಿತ್ರವು ತಮ್ಮ ತಲೆಯ ಮೇಲೆ ನಗರದ ಕಟ್ಟಡಗಳನ್ನು ಹಿಡಿದಿರುವ ಲೋಹದ ಚಪ್ಪಡಿಗಳನ್ನು ಹೊತ್ತ ಕೆಲಸಗಾರರಂತೆ ಕಾಣುತ್ತದೆ. ಚಿತ್ರವು ನಗರದ ಉದ್ಯಾನವನವನ್ನು ತೋರಿಸುತ್ತದೆ.
ಕೆಲಸಗಾರರೇ ನಗರವನ್ನು ಈ ರೀತಿ ಮಾಡಿದ್ದು, ಕಾರ್ಮಿಕರಿಲ್ಲದೆ ಅಂತಹ ನಗರವೇ ಇರಲಾರದು ಎಂಬುದು ಚಿತ್ರದ ಹಿಂದಿನ ಕಲ್ಪನೆ ಎನ್ನುತ್ತಾರೆ ಅಜೀಶ್. ಕಳೆದ ವರ್ಷದ ಸ್ಪರ್ಧೆಯಲ್ಲೂ ಅಜೀಶ್ ಭಾಗವಹಿಸಿದ್ದರು.