ಪೆರ್ಲ: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ 45ನೇ ವಾರ್ಷಿಕ ಸಮಾರಂಭ ಇಂದು(ಡಿ. 4) ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಜರುಗಲಿದೆ.
ಬೆಳಗ್ಗೆ 7ಕ್ಕೆ ಗಣಪತಿ ಹೋಮ ನಡೆಯುವುದು. 8ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 6.30ಕ್ಕೆ ಶರಣಂವಿಳಿ, ತಾಯಂಬಕ, ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಿಂದ ಉಲ್ಫೆ ಮೆರವಣಿಗೆ ಅಯ್ಯಪ್ಪ ಭಜನಾ ಮಂದಿರಕ್ಕೆ ಆಗಮಿಸುವುದರೊಂದಿಗೆ ಮಹಾಮಂಗಳಾರತಿ ನಡೆಯುವುದು.