ಕೊಟ್ಟಾರಕ್ಕರ: ಗೋಪೂಜೆ ಆಧುನಿಕ ಜಗತ್ತಿಗೆ ಅಪಮಾನ ಎಂದು ಸಿಪಿಎಂ ಪಿ.ಬಿ. ಸದಸ್ಯ ಎಸ್ ರಾಮಚಂದ್ರನ್ ಪಿಳ್ಳೆ ಹೇಳಿದ್ದಾರೆ. ಅವರು ಕೊಟ್ಟಾರಕ್ಕರದಲ್ಲಿ ನಡೆದ ಸಿಪಿಎಂ ಕೊಲ್ಲಂ ಜಿಲ್ಲಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಗೋವು ಭಾರತೀಯರ ಹೆಮ್ಮೆ ಎಂದು ನಿನ್ನೆ ಪ್ರಧಾನಿ ಮಾಡಿದ ಭಾಷಣವನ್ನು ರಾಮಚಂದ್ರನ್ ಪಿಳ್ಳೈ ಉಲ್ಲೇಖಿಸಿದ್ದಾರೆ.
ಗೋವು ಪರಿಶುದ್ಧವಾಗಿದೆ ಮತ್ತು ಗೋವು ತಾಯಿ ಎಂದು ಪ್ರಧಾನಿ ಹೇಳುತ್ತಾರೆ. ಇದು ಆಧುನಿಕ ಜಗತ್ತಿಗೇ ಅವಮಾನ. ಹಾಲನ್ನು ಹಸು ಮಾತ್ರವೇ ಕೊಡುತ್ತದೆಯೇ? ಕುರಿಗಳಿವೆ, ಎಮ್ಮೆಗಳಿವೆ, ಒಂಟೆಗಳಿವೆ. ಹಾಗೆಂದು ಅವುಗಳನ್ನು ನೆನಪಿಸದಿರುವುದು ಯಾಕೆ ಎಂದು ಪ್ರಶ್ನಿಸಿದ ಎಸ್ ರಾಮಚಂದ್ರನ್ ಪಿಳ್ಳೈ ಮಾತನಾಡಿ, ಬಿಜೆಪಿ ಆಡಳಿತವಿರುವ ರಾಜ್ಯಗಳು ಒಂದರ ಹಿಂದೆ ಒಂದರಂತೆ ಗೋ ಸಂರಕ್ಷಣಾ ಕಾನೂನುಗಳನ್ನು ಜಾರಿಗೊಳಿಸುತ್ತಿವೆ. ಇದು ನಮ್ಮನ್ನು ಎಲ್ಲಿಗೆ ಒಯ್ಯುತ್ತಿದೆ ಎಂಬುದರ ಸೂಚನೆ ಎಂದರು.
ಪ್ರಧಾನಿಯವರ ಭಾಷಣ ಇಡೀ ಭಾರತಕ್ಕೆ ಅವಮಾನ ಮಾಡುವಂತಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಪ್ರಾಚೀನ ಪರಿಕಲ್ಪನೆಯ ಪ್ರತಿ ಪಾತ್ರಗಳನ್ನೂ ಬಳಸಿಕೊಂಡು ಕೋಮು ಭಾವನೆಯನ್ನು ಕೆರಳಿಸಲು ಪ್ರಯತ್ನಿಸುತ್ತಿವೆ. ಇದೇ ರೀತಿಯ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಪುಷ್ಪಕವಿಮಾನ, ಮಾನವ ದೇಹ, ಆನೆಯ ತಲೆ ಮತ್ತು ಗಣಪತಿಯೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ ಎಸ್ ರಾಮಚಂದ್ರನ್ ಪಿಳ್ಳೆ.
ವಿಜ್ಞಾನ ಮತ್ತು ತಂತ್ರಜ್ಞಾನವು ಪ್ರಾಚೀನ ಕಾಲದಲ್ಲೂ ಇತ್ತೆಂದು ತೋರಿಸಲು ಈ ಕಥೆಗಳನ್ನು ಹೇಳಲಾಗುತ್ತದೆ. ಆದರೆ ಹಳೆಯ ಸಂಸ್ಕøತಿಯಿರುವ ಎಲ್ಲ ದೇಶಗಳ ಇತಿಹಾಸವನ್ನು ಅವಲೋಕಿಸಿದರೂ ಅವರವರ ಕಲ್ಪನೆಗೆ ತಕ್ಕಂತೆ ಇಂತಹ ನೂರಾರು ಕಥಾನಕಗಳಿವೆ ಎಂಬುದು ರಾಮಚಂದ್ರನ್ ಪಿಳ್ಳೆ ಬೊಟ್ಟುಮಾಡಿದ್ದಾರೆ. ವರ್ತಮಾನದ ಯುವ ಸಮಾಜದ ಸವಾಲುಗಳು, ಭವಿಷ್ಯದ ಚಿಂತನೆಗಳ ಬಗ್ಗೆ ನಾವು ಹೊರಳದ ಹೊರತು ನೆಮ್ಮದಿಯ ಸಮಾಜ ಸೃಷ್ಟಿ ಸಾಧ್ಯವಾಗದು. ವಿಘಟನೆಯ ಮನಸ್ಸು ನಿರ್ಮಾಣ ಅವನತಿಗೆ ಕಾರಣವಾಗುವುದೆಂದು ರಾಮಚಂದ್ರನ್ ಪಿಳ್ಳೆ ಎಚ್ಚರಿಸಿದ್ದಾರೆ.