HEALTH TIPS

ಪಡಿತರ ಅಂಗಡಿಗಳು ಜನಸಾಮಾನ್ಯರ ಆಶ್ರಯ ತಾಣವಾಗಬೇಕು: ಸಚಿವ ಜಿ.ಆರ್.ಅನಿಲ್

             ಕಾಸರಗೋಡು: ಪಡಿತರ ಅಂಗಡಿಗಳು ಜನಸಾಮಾನ್ಯರ ಆಶ್ರಯ ತಾಣವಾಗಬೇಕಿದ್ದು, ಪಡಿತರ ಅಂಗಡಿಗಳ ಚಹರೆ ಬದಲಾಗಬೇಕು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್.ಅನಿಲ್ ಹೇಳಿದರು. 

               ತಾತ್ಕಾಲಿಕವಾಗಿ ರದ್ದಾದ ಪಡಿತರ ಅಂಗಡಿಗಳಿಗೆ ಸಂಬಂಧಿಸಿದ ಕಡತಗಳ ಇತ್ಯರ್ಥಕ್ಕಾಗಿ ಕಾಸರಗೋಡು ಕಲೆಕ್ಟರೇಟ್‍ನಲ್ಲಿ ನಡೆದ ಅದಾಲತ್ ನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು. 

            ಸರ್ಕಾರ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳ ನವೀಕರಣದ ಬಗ್ಗೆ ಗಮನ ಹರಿಸುತ್ತಿದೆ.  ಆಹಾರ ಪದಾರ್ಥಗಳ ಗುಣಮಟ್ಟದೊಂದಿಗೆ ವಿತರಣಾ ಕೇಂದ್ರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕ ವಿತರಣಾ ಇಲಾಖೆಯು ಕೇರಳದ ಸಾರ್ವಜನಿಕ ವಿತರಣಾ ಕ್ಷೇತ್ರದಲ್ಲಿನ ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ. ಇಲಾಖೆಯ ಯಾವುದೇ ಕಚೇರಿಗೆ ಭೇಟಿ ನೀಡಿದ ಕಾರ್ಡುದಾರರಿಗೆ ಸ್ಪಷ್ಟ ಉತ್ತರಗಳು ಲಭ್ಯವಾಗುವಂತೆ ಮಾಡಬೇಕು. ಇದಕ್ಕಾಗಿ ಎಲ್ಲ ಕಚೇರಿಗಳಲ್ಲಿ ಮುಂಭಾಗ ಕಚೇರಿ ತೆರೆಯಲಾಗುವುದು ಎಂದು ಸಚಿವರು ತಿಳಿಸಿದರು.

                 ಸೂಕ್ತವಲ್ಲದ ಆದ್ಯತಾ ಕಾರ್ಡ್‍ಗಳನ್ನು ಹಿಂಪಡೆಯುವ ಪ್ರಕ್ರಿಯೆಯ ಪರಿಣಾಮವಾಗಿ 1.62 ಲಕ್ಷ ಕಾರ್ಡ್‍ಗಳನ್ನು ಹಿಂತಿರುಗಿಸಲಾಗಿದೆ. ಇನ್ನೂ ಕಾರ್ಡ್ ವಾಪಸ್ ಕೊಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೇರಳದಲ್ಲಿ ಶೇಕಡಾ 43 ರಷ್ಟು ಜನರು ಆದ್ಯತಾ ಕಾರ್ಡ್‍ಗೆ ಅರ್ಹರಾಗಿದ್ದಾರೆ. ಅರ್ಹರನ್ನು ಕೈ ಬಿಡಬಾರದು. ಅರ್ಹ ವ್ಯಕ್ತಿಗಳು ಆದ್ಯತೆಯ ಕಾರ್ಡ್‍ಗಳನ್ನು ಹೊಂದಿಲ್ಲದ ಕಾರಣ ಪ್ರಯೋಜನಗಳನ್ನು ನಿರಾಕರಿಸಬಾರದು ಎಂದರು.

                  ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ದೃಷ್ಟಿಯಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಶುದ್ಧೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಮೊದಲ ಹಂತದಲ್ಲಿ  ಪಡಿತರ ಚೀಟಿಗಳನ್ನು ಸ್ವಚ್ಛಗೊಳಿಸುವ ಲಕ್ಷ್ಯವಿರಿಸಲಾಗಿದೆ. ಕಾರ್ಡ್‍ದಾರರಿಗೆ ಕಾರ್ಡ್‍ಗಳಲ್ಲಿನ ನ್ಯೂನತೆಗಳನ್ನು ಪರಿಹರಿಸಲು ಸಹ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ 1500ಕ್ಕೂ ಹೆಚ್ಚು ಪಡಿತರ ಅಂಗಡಿಗಳ ತಾತ್ಕಾಲಿಕ ಸ್ಥಗಿತ ಹಾಗೂ ಇತರೆ ಅಂಗಡಿಗಳ ವಿಲೀನಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಅದಾಲತ್ ಆಯೋಜಿಸಲಾಗುತ್ತಿದೆ. ಅದಾಲತ್ ಮುಗಿದ ನಂತರ ಪ್ರತಿ ಪಡಿತರ ಅಂಗಡಿಗಳು ಸಮರ್ಪಕವಾಗಿ ಸೇವೆ ಮುಂದುವರಿಸಲಿದೆ. ಪರವಾನಗಿದಾರರು ಸಾರ್ವಜನಿಕ ವಿತರಣಾ ಇಲಾಖೆಯ ಮುಖ್ಯ ಕೊಂಡಿಯಾಗಿದ್ದು, ಅವರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಚಿವರು ಹೇಳಿದರು. ಪಡಿತರ ಅಂಗಡಿ ಮಾಲೀಕರು ಮತ್ತು ಇಲಾಖೆ ಪರಸ್ಪರ ವಿಶ್ವಾಸದಿಂದ ಮುನ್ನಡೆಯಬೇಕು ಮತ್ತು ಕಾರ್ಡ್‍ದಾರರಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಸಚಿವ ಜಿ.ಆರ್.ಅನಿಲ್ ತಿಳಿಸಿದರು.

                     ಸಾರ್ವಜನಿಕ ವಿತರಣಾ ಇಲಾಖೆ ನಿರ್ದೇಶಕ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರ್ ಚಂದ್ ಮಾತನಾಡಿದರು. ಪಡಿತರ ಉಪ ನಿಯಂತ್ರಣಾಧಿಕಾರಿ ಮನೋಜ್ ಕುಮಾರ್ ಕೆ ಸ್ವಾಗತಿಸಿ, ಜಿಲ್ಲಾ ಸರಬರಾಜು ಅಧಿಕಾರಿ ಅನಿಲ್ ಕುಮಾರ್ ಕೆ ಪಿ ವಂದಿಸಿದರು. 


         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries