ಕುಂಬಳೆ: ಸಮನ್ವಯದ ನೇತೃತ್ವದಲ್ಲಿ ಆಯೋಜಿಸಲಾದ ಕಲೋತ್ಸವ ಭಾರತ್ ಉತ್ಸವ-21 ಸಮಾರೋಪ ಸಮಾರಂಭ ಕುಂಬಳೆ ಪೈ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಈ ಸಂದರ್ಭ ನಡೆದ ಸಾಂಸ್ಕøತಿಕ ಸಂಗಮವನ್ನು ಪತ್ರಕರ್ತ ಚಂದ್ರಮೋಹನ ದೀಪ ಬೆಳಗಿಸಿ ಉದ್ಘಾಟಿಸಿದರು. ಜನಜೀವನದ ಸಾಂಸ್ಕøತಿಕ ಏಕತೆಯನ್ನು ಭಾರತ್ ಉತ್ಸವ ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಕುಂಬಳೆ ಪೋಲೀಸ್ ಠಾಣೆಯ ನಿವೃತ್ತ ಎಸ್.ಐ. ಸೋಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗಿಗಳು, ಅಧ್ಯಾಪಕರು ಹಾಗೂ ಸಾರ್ವಜನಿಕರ ಏಕೋಪನವಾದ ಭಾರತ್ ಉತ್ಸವ್ ಈ ನೆಲದ ಸಮಗ್ರತೆಯ ಸಂಕೇತ ಎಂದು ತಿಳಿಸಿದರು.
ಗಾಯಕ ರಾಮದಾಸ್ ಕಾಞಂಗಾಡ್, ಆದರ್ಶ ಬಿ.ಎಂ, ನ್ಯಾಯವಾದಿ ಕೆ.ಎಂ.ಹಸೈನಾರ್, ಸರೋಜ ಆರ್. ಬಲ್ಲಾಳ್, ಗಿರಿಜಾ ತಾರಾನಾಥ್, ದಾಮೋದರ ಮೊಗ್ರಾಲ್ ಪುತ್ತೂರು, ನಿವೃತ್ತ ಎಸ್.ಐ.ಸುರೇಶ್ ನಾಯ್ಕಾಪು, ಶೇಂತಾರು ನಾರಾಯಣ ಭಟ್, ಹಮೀದ್ ಪೊವ್ವಲ್, ಎಂ.ಕೆ.ಕುಟ್ಯಾನಂ, ಜಯರಾಮ ಪೂಜಾರಿ, ದಿನೇಶ್ ಚೆರುಗೋಳಿಉಪಸ್ಥಿತರಿದ್ದು ಶುಭಾಶಂಸನೆಗೈದರು. ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಸಂಯುಕ್ತ ಸೇನಾಧಿಕಾರಿ ಜನರಲ್. ಬಿಪಿನ್ ರಾವತ್ ಮತ್ತು ಇತರ ಸೈನಿಕರಿಗೆ ಸಂತಾಪ ಸೂಚಿಸಲಾಯಿತು. ದಿಲೀಪ್ ಪೆರ್ಲ ಸ್ವಾಗತಿಇಸ, ಶೇಂತಾರು ನಾರಾಯಣ ಭಟ್ ವಂದಿಸಿದರು.
ಸಮನ್ವಯದ ನೇತೃತ್ವದಲ್ಲಿ ಡಿ.19 ರಂದು ಬೆಳಿಗ್ಗೆ 10 ಕ್ಕೆ ಕುಂಬಳೆಯ ಪೈ ಸಭಾಂಗಣದಲ್ಲಿ ಭಾಷಾ ಸಂಗಮ ನಡೆಯಲಿದೆ. ಬಳಿಕ ಕಲೋತ್ಸವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.