ಪತ್ತನಂತಿಟ್ಡ: ಶಬರಿಮಲೆ ದೇಗುಲದ ಮುಂದೆ ಪ್ರಸಾದ ಸ್ವೀಕರಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅಚ್ಚರಿ ಮೂಡಿಸಿದ್ದಾರೆ. ಈ ಚಿತ್ರವನ್ನು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕ್ಷೇತ್ರದ ಗರ್ಭಗೃಹ ಮುಂಭಾಗ ಪ್ರಸಾದ ಸ್ವೀಕರಿಸುತ್ತಿರುವ ಸಚಿವರ ಅಂಗೈಯಿಂದ ತೀರ್ಥ ಹರಿಯುತ್ತಿರುವುದು ಭಕ್ತರಿಂದ ಭಾರೀ ಟೀಕೆ, ಪ್ರತಿಭಟನೆಗೆ ಕಾರಣವಾಗಿದೆ. ಅಯ್ಯಪ್ಪನ ಕೋಪವನ್ನು ತಣಿಸುವ ಮನೋವೈಜ್ಞಾನಿಕ ಕ್ರಮವೆಂದೇ ಚಿತ್ರ ಪರಿಗಣಿಸಬೇಕು ಎಂದು ಹೇಳಲಾಗಿದೆ.
ದೇವಸ್ವಂ ಸಚಿವ ಕೆ.ಎಸ್. ರಾಧಾಕೃಷ್ಣನ್ ನಿನ್ನೆ ಸನ್ನಿಧಿಗೆ ಭೇಟಿ ನೀಡಿದ್ದರು. ಸಚಿವರು ಅಯ್ಯಪ್ಪ ಮೂರ್ತಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಮಕರವಿಳಕ್ಕು ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ ಸಚಿವರು ಇಂದು ವಾಪಸಾದರು.
ಸಿಪಿಎಂಗೆ ಸಾಧ್ಯವಾಗದಿದ್ದರೆ ದೇವಸ್ವಂ ಇಲಾಖೆಯನ್ನು ಧಾರ್ಮಿಕ ಮುಖಂಡರಿಗೆ ಹಸ್ತಾಂತರಿಸಿ ಅಥವಾ , ಘಟಕ ಪಕ್ಷಗಳಿಗೆ ಹಸ್ತಾಂತರಿಸಬೇಕು ಎಂಬ ಟೀಕೆಗಳು ಪಕ್ಷ ಮತ್ತು ಎಡರಂಗಕ್ಕೆದುರಾಗಿ ವ್ಯಕ್ತಗೊಂಡಿದ್ದವು. ಮಹಿಳೆಯರ ಪ್ರವೇಶ ವಿಚಾರದಲ್ಲಿ ಸಿಪಿಎಂ ಮತ್ತು ಎಲ್ ಡಿಎಫ್ ವಿರುದ್ಧ ಅಯ್ಯಪ್ಪ ಭಕ್ತರ ಆಕ್ರೋಶ ಮುಂದುವರಿದಿರುವಾಗಲೇ ಭಕ್ತರಿಗೆ ನೋವುಂಟು ಮಾಡುವ ಸಚಿವರ ಕೃತ್ಯ ನಡೆದಿದೆ. ತನ್ನ ನಂಬಿಕೆಯಂತೆ ನಡೆದುಕೊಳ್ಳುತ್ತಿದ್ದೇನೆ ಎಂದು ಕೆ. ರಾಧಾಕೃಷ್ಣನ್ ಅವರಿಂದ ವಿವರಣೆಯೂ ಈ ಮೂಲಕ ವ್ಯಕ್ತಗೊಂಡಿದೆ.