ತೆಂಗಿನ ನೀರು ದೇಹಕ್ಕೆ ತಂಪು ಮತ್ತು ಹೆಚ್ಚು ಉಲ್ಲಾಸಕರ ಎಂದು ನಮಗೆಲ್ಲರಿಗೂ ತಿಳಿದಿದೆ. ಆದಾಗ್ಯೂ, ಈ ನೈಸರ್ಗಿಕ ಪಾನೀಯವು ನಿಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನವನ್ನು ನೀಡುತ್ತದೆಯೇ ಎಂದು ತಿಳಿದಿದೆಯೇ?
ಹೌದು, ನಿಮ್ಮ ತ್ವಚೆ ಮತ್ತು ಕೂದಲ ರಕ್ಷಣೆಯ ದಿನಚರಿಗಳಲ್ಲಿ ಈ ನೈಸರ್ಗಿಕ ಘಟಕಾಂಶವನ್ನು ಸೇರಿಸಿಕೊಳ್ಳಬಹುದು. ಆದ್ದರಿಂದ ಮನೆಯಲ್ಲಿಯೇ ಪ್ರಯತ್ನಿಸಬಹುದಾದ ತೆಂಗಿನ ನೀರಿನೊಂದಿಗೆ ಕೆಲವು ಬ್ಯೂಟಿ ಹ್ಯಾಕ್ಗಳು ಇಲ್ಲಿವೆ.ತೆಂಗಿನ ನೀರಿನ ಸೌಂದರ್ಯ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಡ್ರೈ ಸ್ಕಿನ್ಗೆ ಫೇಸ್ ಸ್ಪ್ರೇ: ನೀವು ಶುಷ್ಕ ಮತ್ತು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ತೆಂಗಿನ ನೀರು ಹಿತವಾದ ನೈಸರ್ಗಿಕ ಘಟಕಾಂಶವಾಗಿದೆ. ಇದು ನಿಮ್ಮ ತ್ವಚೆಗೆ ಉತ್ತಮ ಮಾಯಿಶ್ಚರೈಸರ್ ಆಗಿದ್ದು, ಪೋಷಣೆ ಮಾಡುತ್ತದೆ. ಇದಕ್ಕಾಗಿ ನೀವು ಒಂದು ಭಾಗ ತೆಂಗಿನ ನೀರು ಮತ್ತು ಒಂದು ಭಾಗ ರೋಸ್ ವಾಟರ್ ತೆಗೆದುಕೊಂಡು ಎರಡನ್ನೂ ಒಟ್ಟಿಗೆ ಸ್ಪ್ರೇ ಬಾಟಲಿಯಲ್ಲಿ ಮಿಶ್ರಣ ಮಾಡಿ. ಮುಖದ ಮೇಲೆ ಸ್ಪ್ರೇ ಮಾಡಿ.
ಮೊಡವೆಗಳ ನಿವಾರಣೆಗೆ ಫೇಸ್ ಪ್ಯಾಕ್ : ತೆಂಗಿನ ನೀರಿನಲ್ಲಿ ವಿಟಮಿನ್ ಸಿ, ಅಮೈನೋ ಆಮ್ಲ ಹಾಗೂ ಆಂಟಿಮೈಕ್ರೊಬೈಯಲ್ ಗುಣಗಳನ್ನು ಹೊಂದಿದ್ದು, ಇದು ಚರ್ಮಕ್ಕೆ ಹೊಳಪುಕೊಡುವ ಹಾಗೂ ಮೊಡವೆಗಳಿಗೆ ಚಿಕಿತ್ಸೆಯನ್ನು ನೀಡುತ್ತದೆ. ಮೊಡವೆ ಪೀಡಿತ ಚರ್ಮಕ್ಕಾಗಿ ದಪ ಪೇಸ್ಟ್ ಅನ್ನು ರೂಪಿಸಲು ಅರಿಶಿನ ಮತ್ತು ಕೆಂಪು ಶ್ರೀಗಂಧದೊಂದಿಗೆ ತೆಂಗಿನ ನೀರನ್ನು ಮಿಕ್ಸ್ ಮಾಡಿ, ಫೇಸ್ ಮಾಸ್ಕ್ ರೀತಿಯಲ್ಲಿ ಹಾಕಿ. ಇದರಿಂದ ಮೊಡವೆ ಕಡಿಮೆಯಾಗುವುದು.
ಕೂದಲು ಉದುರುವಿಕೆ ಮತ್ತು ಫ್ರಿಜ್ಗಾಗಿ ಹೇರ್ ಮಸಾಜ್ : ತೆಂಗಿನ ನೀರು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುವ ಮೂಲಕ ಮತ್ತು ನೆತ್ತಿಗೆ ಸರಿಯಾದ ಪೋಷಣೆಯನ್ನು ಒದಗಿಸುವ ಮೂಲಕ ಕೂದಲು ಉದುರುವಿಕೆಯನ್ನು ತಡೆಯುವುದು. ಜೊತೆಗೆ ಅನಿಯಂತ್ರಿತ ಫ್ರಿಜ್ಜಿ ಕೂದಲಿನ ವಿರುದ್ಧ ಹೋರಾಡುತ್ತದೆ. ಇದಕ್ಕಾಗಿ ತೆಂಗಿನ ನೀರಿನಿಂದ ಕೂದಲಿಗೆ ಮಸಾಜ್ ಮಾಡಬೇಕು. ತೆಂಗಿನ ನೀರು ಕೂದಲಿನ ಬುಡದಿಂದ ದ ತುದಿಯವರೆಗೆ ನೈಸರ್ಗಿಕ ಕಂಡೀಷನಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ತೆಂಗಿನ ಎಣ್ಣೆಯನ್ನು ಹೊರತುಪಡಿಸಿ, ತೆಂಗಿನಕಾಯಿ ನೀರಿನ ಮಸಾಜ್ ನಿಂದ ಯಾವುದೇ ಜಿಡ್ಡಾಗುಗುವುದಿಲ್ಲ. ಕೇವಲ ಒಂದು ಸುತ್ತಿನ ಶಾಂಪೂ ಬಳಸಿ ತೊಳೆಯಬಹುದು.
ತಲೆಹೊಟ್ಟಿಗಾಗಿ ಕೂದಲು ತೊಳೆಯುವ ನೀರು: ತೆಂಗಿನ ನೀರು ನೈಸರ್ಗಿಕ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ನೆತ್ತಿಯ ತುರಿಕೆ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆಗೆ ಕಾರಣವಾಗುವ ಅಥವಾ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುವ ಇತರ ನೆತ್ತಿಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ಮತ್ತು ತಡೆಯಲು ಉತ್ತಮವಾಗಿದೆ. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಒಂದು ಭಾಗ ತೆಂಗಿನ ನೀರು ಮತ್ತು ಒಂದು ಭಾಗ ಆಪಲ್ ಸೈಡರ್ ವಿನೆಗರ್ ಅನ್ನು ಮಿಶ್ರಣ ಮಾಡಿ. ಶಾಂಪೂ ಮತ್ತು ಕಂಡಿಷನರ್ನಿಂದ ತೊಳೆದ ನಂತರ , ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿನ ಉದ್ದಕ್ಕೆ ಸುರಿದು, ಒಂದು ನಿಮಿಷ ಬಿಡಿ, ನಂತರ ತಂಪಾದ ನೀರಿನಿಂದ ತೊಳೆಯಿರಿ. ತಾಜಾ ಮತ್ತು ಚೈತನ್ಯವನ್ನು ಅನುಭವಿಸುವ ಹೊಳೆಯುವ, ಫ್ರಿಜ್-ಮುಕ್ತ ಕೂದಲನ್ನು ಆನಂದಿಸಿ .