HEALTH TIPS

ಕೋವಿಡ್ ಲಸಿಕೆಯ ಮೂರನೇ ಡೋಸ್ ನೀಡಿಕೆಗೆ ಐಸಿಎಂಆರ್ ವಿರೋಧ

                  ಪುಣೆ : ದೇಶದ ವಿವಿಧೆಡೆ ಒಮೈಕ್ರಾನ್ ಪ್ರಕರಣಳು ವರದಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಾಗರಿಕರಿಗೆ ಏಕಾಏಕಿಯಾಗಿ ಮೂರನೇ ಕೋವಿಡ್ ಲಸಿಕೆಯ ಡೋಸ್ ನೀಡುವುದನ್ನು ಅಥವಾ ಕೋವಿಶೀಲ್ಡ್ ಡೋಸ್ ನೀಡಿಕೆಯ ಸಮಯದ ಅಂತರದಲ್ಲಿ ಬದಲಾವಣೆ ಮಾಡುವುದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿರೋಧ ವ್ಯಕ್ತಪಡಿಸಿದೆ.

‌                  ಈ ಬಗ್ಗೆ ಪುಣೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಐಸಿಎಂಆರ್ ನ ಸೋಂಕುರೋಗಶಾಸ್ತ್ರ ವಿಭಾಗದ ವರಿಷ್ಠ ಡಾ. ಸಮೀರನ್‌ ಪಾಂಡಾ ಅವರು ಎರಡು ಡೋಸ್‌ಗಳ ಲಸಿಕೀಕರಣವು ದೇಶದ ಅತಿ ದೊಡ್ಡ ಜನಸಂಖ್ಯೆಗೆ ದೊರೆಯುವಂತೆ ಮಾಡುವುದಕ್ಕೆ ತಮ್ಮ ಸಂಸ್ಥೆಯು ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಿದೆ ಎಂದರು.
                   'ಒಮೈಕ್ರಾನ್ ಪ್ರಕರಣಗಳಲ್ಲಿ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಸೌಮ್ಯ ರೋಗಲಕ್ಷಣಗಳಿರುವುದು ಕಂಡುಂದಿದೆ. ಹೀಗಿರುವಾಗ ಏಕಾಏಕಿಯಾಗಿ ಮೂರನೇ ಡೋಸ್ ನೀಡುವುದಾಗಲಿ ಅಥವಾ ಕೋವಿಶೀಲ್ಡ್ ಡೋಸ್‌ಗಳ ನೀಡಿಕೆಯ ಅಂತರದಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ಶಿಫಾರಸು ಮಾಡಬಾರದು''ಎಂದವರು ಹೇಳಿದರು.
                ''ಆದರೆ ರೋಗನಿರೋಧಕಶಕ್ತಿ ಕಡಿಮೆಯಿರುವ ವ್ಯಕ್ತಿಗಳಲ್ಲಿ ಮೂರನೇ ಡೋಸ್ ನೀಡುವ ಕುರಿತ ನಿರ್ಧಾರವನ್ನು ಸ್ವಲ್ಪ ಸಮಯದ ಆನಂತರ ತೆಗೆದುಕೊಳ್ಳಬಹುದಾಗಿದೆ'' ಎಂದು ಡಾ. ಪಂಡಾ ತಿಳಿಸಿದರು.

                ಭಾರತೀಯ ಹವಾಮಾನಕ್ಕೆ ಅನುಗುಣವಾಗಿ ಬೂಸ್ಟರ್‌ ಡೋಸ್ ನೀಡಿಕೆಯ ಕುರಿತ ವೈಜ್ಞಾನಿಕ ಪುರಾವೆಯ ಬಗ್ಗೆ ಮೌಲ್ಯಮಾಪನ ನಡೆಸಲಾಗುವುದು ಹಾಗೂ ಆ ಕುರಿತು ತಾಂತ್ರಿಕ ಸಲಹೆ ತಂಡದ ಜೊತೆ ಘೋಷಣೆಯನ್ನು ಮಾಡಲಾಗುವುದು ಎಂದರು.
           ಎರಡು ಡೋಸ್‌ಗಳ ಗಳ ನೀಡುವಿಕೆಯ ಅಂತರವನ್ನು ಕಡಿಮೆಗೊಳಿಸಬೇಕೆಂಬ ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿ ಡಾ. ಸಮೀರನ್ ಪಾಂಡಾ ಅವರು ಪ್ರಸಕ್ತ ಡೋಸ್ ನೀಡಿಕೆಗೆ ಸಂಬಂಧಿಸಿ ನಿಗದಿಪಡಿಸಲಾದ ಅಂತರವು ಉತ್ತಮವಾಗಿದೆಯೆಂಬುದನ್ನು ವೈಜ್ಞಾನಿಕ ಪುರಾವೆಗಳು ನಿರೂಪಿಸಿವೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries