ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಗುರುವಾರ ನಡೆಯಿತು.
2019-20ನೇ ಶೈಕ್ಷಣಿಕ ವರ್ರ್ಗದ ಶಾಲೆಯ ಯೋಜನೆಗಳಾದ ಮಧ್ಯಾಹ್ನದ ಊಟ, ಕಂಪ್ಯೂಟರ್, ವಾಹನ ವ್ಯವಸ್ಥೆಗಳ ಆಯವ್ಯಯಗಳನ್ನು ಮಂಡಿಸಲಾಯಿತು.2021-22ನೇ ಶೈಕ್ಷಣಿಕ ವರ್ಷದ ನೂತನ ಪದಾಧಿಕಾರಿಗಳಿಗೆ ಅ|ಧಿಕಾರ ಹಸ್ತಾಂತರಿಸಲಾಯಿತು.ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಮಂಜುನಾಥ ಪಿಲಿಂಗಲ್ಲು, ಉಪಾಧ್ಯಕ್ಷ ಬಾಬು ಸ್ವರ್ಗ, ಮಾತೃ ಸಂಘದ ಅಧ್ಯಕ್ಷೆಯಾಗಿ ದಿವ್ಯಾ ಸಾಗರ್, ಉಪಾಧ್ಯಕ್ಷೆ ಉಷಾ ಅರುಣ್ ಅಧಿಕಾರ ಸ್ವೀಕರಿಸಿದರು.
ಪ್ರಸ್ತುತ ವರ್ಷದ ಶಾಲೆಯ ವಿವಿಧ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಲಾಯಿತು. ಶಾಲೆಯಲ್ಲಿ ಅಡುಗೆ ಕೆಲಸಕ್ಕೆ ನಿಯೋಜನೆಗೊಂಡು ಕಳೆದ ಒಂಬತ್ತು ವರ್ಷಗಳಿಂದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಸುಕನ್ಯಾ ಎಸ್.ಕೆ. ಅವರನ್ನು ಮಾತೃ ಸಂಘದ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವಾರ್ಡ್ ಸದಸ್ಯ ರಾಮಚಂದ್ರ ಮೊಳಕ್ಕಾಲು, ಮಾಜಿ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಶ್ರೀಧರ ಪೂಕರೆ, ಮಾಜಿ ಮಾತೃ ಸಂಘದ ಅಧ್ಯಕ್ಷೆ ಪ್ರಿಯಾ ಚಾಕಟೆ ಕುಮೇರಿ ಉಪಸ್ಥಿತರಿದ್ದರು. ರಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸಂಸ್ಕøತ ಶಿಕ್ಷಕ ಶ್ರಿಹರಿ ಶಂಕರ ಶರ್ಮ ಪ್ರಾರ್ಥಿಸಿದರು.ಹಿರಿಯ ಶಿಕ್ಷಕ ವೆಂಕಟ ವಿದ್ಯಾಸಾಗರ್ ವಂದಿಸಿದರು.ಶಿಕ್ಷಕಿ ಗೀತಾಂಜಲಿ ಎಂ.ಬಿ.ನಿರೂಪಿಸಿದರು.