ಕೊಯಮತ್ತೂರು; ಕೂನೂರಿನಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ, ಸೇನಾ ಪಡೆಗಳ ಜಂಟಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನಾ ಅಧಿಕಾರಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಕೊಯಮತ್ತೂರಿನಲ್ಲಿ ಕುಡಿದು ಪಾರ್ಟಿ ನಡೆಸಲಾಗಿತ್ತು. ಇದರ ಹಿಂದೆ ಕೇರಳೀಯರಿದ್ದರು ಎಂಬ À ಸೂಚನೆಗಳಿವೆ.
ಕೊಯಮತ್ತೂರಿನ ಮೂರು ಕಾಲೇಜುಗಳ ಕ್ಯಾಂಟೀನ್‍ಗಳನ್ನು ನಡೆಸುತ್ತಿರುವ ಮಲಯಾಳಿಗಳು ಸೈನಿಕರ ವೀರ ಮರಣವನ್ನು ಆಚರಿಸಲು ಗುಂಡಿನ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ.
ನೂರಾರು ಮಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಏಜೆನ್ಸಿಗಳು ಅಪರಾಧಿಗಳು ಮತ್ತು ಭಾಗವಹಿಸಿದವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿವೆ.
ಬಿಪಿನ್ ರಾವತ್ ಸಾವಿನ ಕುರಿತು ದ್ವೇಷಪೂರಿತ ಕಾಮೆಂಟ್‍ಗಳನ್ನು ಮಾಡಿದ್ದಕ್ಕಾಗಿ ಹಲವಾರು ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಇದರ ಬೆನ್ನಲ್ಲೇ ಸೈನಿಕರ ಸಾವಿನ ಸಂಭ್ರಮಾಚರಣೆಗೆ ಕುಡಿತದ ಪಾರ್ಟಿ ನಡೆದಿದೆ ಎಂಬ ವರದಿಗಳು ಬಂದಿವೆ.