ಮುಂಬೈ: ಸುಪ್ರೀಂ ಕೋರ್ಟ್ ಪಾವತಿಸಲು ಆದೇಶಿಸಿದ್ದ ಕೋಟ್ಯಂತರ ಮೊತ್ತವನ್ನು ಸಹಾರಾ ಸಂಸ್ಥೆ ಇನ್ನೂ ಬಾಕಿ ಉಳಿಸಿಕೊಂಡಿದೆ ಎಂದು ಸೆಬಿ ಸ್ಪಷ್ಟಪಡಿಸಿದೆ.
ಆಗಸ್ಟ್ 2012ರಲ್ಲಿ ಸೆಬಿಗೆ 25,781 ಕೋಟಿ ರೂ. ಪಾವತಿಸುವಂತೆ ಸುಪ್ರೀಂ ಕೋರ್ಟ್ ಸಹಾರಾ ಸಂಸ್ಥೆಗೆ ಆದೇಶಿಸಿತ್ತು. ಆದರೆ ಇದುವರೆಗೂ ಸಹಾರಾ 15,000 ಕೋಟಿ ರೂ.ಗಳನ್ನು ಮರಳಿಸಿದೆ.
ಸಹಾರಾ ಸಂಸ್ಥೆಯಿಂದ ಹನವನ್ನು ಮರಳಿ ಪಡೆಯಲು ಸೆಬಿ ಯಾವ್ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಮಾಧ್ಯದ ಮಂದಿ ಸೆಬಿ ಮುಖ್ಯಸ್ಥ ಅಜಯ್ ತ್ಯಾಗಿಯನ್ನು ಪ್ರಶ್ನಿಸಿದ್ದರು. ಆಗ ತ್ಯಾಗಿ ತಾವು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸುತ್ತಿರುವುದಾಗಿ ಹೇಳಿದ್ದಾರೆ.