ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಪದಚ್ಯುತರಾಗಿರುವ ವಿ.ಕೆ. ಶಶಿಕಲಾ ಅವರಿಂದ ಸವಾಲು ಎದುರಿಸುತ್ತಿರುವ ಎಐಎಡಿಎಂಕೆ ಪಕ್ಷವು ಬುಧವಾರ ತನ್ನ ಬೈಲಾಗಳಿಗೆ ತಿದ್ದುಪಡಿ ಮಾಡಿ, ಒ. ಪನ್ನೀರಸೆಲ್ವಂ ಮತ್ತು ಕೆ. ಪಳನಿಸ್ವಾಮಿ ಅವರ ನಾಯಕತ್ವವನ್ನು ಉಳಿಸಿಕೊಂಡಿದೆ.

ಇಲ್ಲಿ ನಡೆದ ಪಕ್ಷದ ಪ್ರಧಾನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬೈಲಾಗಳಿಗೆ ತಿದ್ದುಪಡಿ ಮಾಡಲಾಗಿದ್ದು, 'ಪ್ರಧಾನ ಕಾರ್ಯದರ್ಶಿ' ಎಂದು ಹೇಳಿಕೊಂಡಿದ್ದ ಶಶಿಕಲಾ ಅವರಿಗೆ ಪಕ್ಷವು ಬಾಗಿಲು ಮುಚ್ಚಿದೆ.
2017ರಲ್ಲೇ ಪಕ್ಷದ ಬೈಲಾಗಳಿಗೆ ತಿದ್ದುಪಡಿ ಮಾಡಿ, ಹೊಸದಾಗಿ ರಚಿಸಲಾದ ಪಕ್ಷದ ಸಂಯೋಜಕ ಮತ್ತು ಜಂಟಿ ಸಂಯೋಜಕ ಸ್ಥಾನಗಳಿಗೆ ಎಲ್ಲಾ ಅಧಿಕಾರವನ್ನು ನೀಡಲಾಗಿತ್ತು. ಇದರ ಜತೆ ಈಗ ಮತ್ತೊಮ್ಮೆ ಬೈಲಾ ತಿದ್ದುಪಡಿ ಮಾಡುವ ಮೂಲಕ ಪಕ್ಷದ ಉನ್ನತ ಸ್ಥಾನಗಳಿಗೆ ಬಲ ತುಂಬಲಾಗಿದೆ.
ಹೊಸದಾಗಿ ಮಾಡಿರುವ ತಿದ್ದುಪಡಿಗಳು ಸಂಯೋಜಕ ಮತ್ತು ಜಂಟಿ ಸಂಯೋಜಕನ ಸ್ಥಾನಕ್ಕೆ ಆಯ್ಕೆ ಮಾಡಲು ಪಕ್ಷದ ಪ್ರಾಥಮಿಕ ಸದಸ್ಯರ ಏಕ ಮತ ಚಲಾವಣೆಯನ್ನು ಕಡ್ಡಾಯಗೊಳಿಸುತ್ತದೆ. ಎಐಎಡಿಎಂಕೆ ಪ್ರಕಾರ, ಶಶಿಕಲಾ ಅವರು ಪಕ್ಷದ ಸದಸ್ಯೆ ಅಲ್ಲ ಎಂದು ಮೂಲಗಳು ತಿಳಿಸಿವೆ.
'ಪಕ್ಷದ ನಾಯಕತ್ವವನ್ನು ಆಯ್ಕೆ ಮಾಡಲು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಪ್ರಾಥಮಿಕ ಸದಸ್ಯರಾಗಿರುವವರು ಮಾತ್ರ ಮತ ಚಲಾಯಿಸಲು ಅರ್ಹರು' ಎಂದು ಹಿರಿಯ ಮುಖಂಡ ಡಿ. ಜಯಕುಮಾರ್ ಸುದ್ದಿಗಾರರಿಗೆ ತಿಳಿಸಿದರು.