ಕೋಝಿಕ್ಕೋಡ್; ಪೊಲೀಸ್ ಸಮವಸ್ತ್ರದಲ್ಲಿರುವ ಎಸ್‌ಐ ಫೋಟೋ ವಿವಾದವಾಗಿದೆ. ಸೇವ್ ದಿ ಡೇಟ್ ಫೋಟೋ ಶೂಟ್ ನ್ನು ಕೋಝಿಕ್ಕೋಡ್ ಜಿಲ್ಲಾ ಪೊಲೀಸ್ ಠಾಣೆಯ ಪ್ರಿನ್ಸಿಪಲ್ ಎಸ್‌ಐ ಅವರು ಅಧಿಕೃತ ಸಮವಸ್ತ್ರದಲ್ಲಿ ಭಾವಿ ವರನೊಂದಿಗೆ ತೆಗೆಸಿಕೊಂಡಿದ್ದಾರೆ. ನಿನ್ನೆ ಈ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.
ವಿವಾಹಕ್ಕೂ ಮುನ್ನ ತೆಗೆದ ಫೋಟೋಗಳು ಪೊಲೀಸ್ ವಿಭಾಗಕ್ಕೆ ಸಂಪೂರ್ಣ ಅವಮಾನಕರ ಎನ್ನಲಾಗಿದೆ. ಎಸ್‌ಐ ಸೇವ್ ದಿ ಡೇಟ್ ಹ್ಯಾಶ್ ಟ್ಯಾಗ್ ನಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ನ ನಾಮಫಲಕದೊಂದಿಗೆ ಸಮವಸ್ತ್ರದಲ್ಲಿ ಎರಡು ನಕ್ಷತ್ರಗಳನ್ನು ಧರಿಸಿದ್ದರು ಮತ್ತು ಎಸ್‌ಐ ಸಮವಸ್ತ್ರದಲ್ಲಿದ್ದಾಗ ಅವರು ಪಡೆದ ಪದಕಗಳನ್ನು ಧರಿಸಿದ್ದರು. ಇದರ ವಿರುದ್ಧ ಪೊಲೀಸರಲ್ಲೇ ಪ್ರತಿಭಟನೆ ಬಲವಾಗಿದೆ.
ಡಿಸೆಂಬರ್ 31, 2015 ರಂದು, ಟಿ.ಪಿ.ಸೆನ್‌ಕುಮಾರ್ ಅವರು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿದ್ದಾಗ, ಪೊಲೀಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಾಗ ಅನುಸರಿಸಬೇಕಾದ ಸೂಚನೆಗಳ ಕುರಿತು ಆದೇಶವನ್ನು ಹೊರಡಿಸಿದ್ದರು. ತಮ್ಮ ವೈಯಕ್ತಿಕ ಖಾತೆಯ ಪ್ರೊಫೈಲ್‌ಗಳಲ್ಲಿ ಅಧಿಕೃತ ಉಡುಪಿನಲ್ಲಿರುವ ಫೋಟೋಗಳನ್ನು ಬಳಸದಂತೆ ಪೊಲೀಸರಿಗೆ ಸೂಚಿಸಲಾಗಿತ್ತು. ಇದೀಗ ಮಹಿಳಾ ಪೋಲೀಸ್ ಅಧಿಕಾರಿ ಸಮವಸ್ತ್ರದೊಂದಿಗೆ ವಿವಾಹವಾಗುವ ಭಾವೀ ಪತಿಯೊಂದಿಗೆ ಪೊಟೊ ತೆಗೆಸಿ ಹಂಚಿರುವುದು ಮೇಲಾಧಿಕಾರಿಗಳ ಅವಕೃಪೆಗೆ ಕಾರಣವಾಗಿದೆ.