ತಿರುಚಿ: ದಕ್ಷಿಣ ರೈಲ್ವೆಯ ಸಹಭಾಗಿತ್ವದಲ್ಲಿ ಎಲೆಕ್ಟ್ರಾನಿಕ್ ಬೈಕ್‌ಗಳ ಬಾಡಿಗೆ ಸೇವಾ ಕೇಂದ್ರವನ್ನು ಇಲ್ಲಿನ ರೈಲು ನಿಲ್ದಾಣದಲ್ಲಿ ಆರಂಭಿಸಲಾಗಿದೆ.
ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಸೇವೆ ಲಭ್ಯವಿರಲಿದ್ದು, ಪ್ರತಿ ಗಂಟೆಗೆ 50 ಪಡೆದು ಬೈಕ್ ಬಾಡಿಗೆಗೆ ನೀಡಲಾಗುತ್ತಿದೆ.
ಸದ್ಯ ಪ್ರತಿ ಗಂಟೆ, ದಿನ ಮತ್ತು ವಾರದ ಆಧಾರದಲ್ಲಿ ಬೈಕ್‌ಗಳನ್ನು ನೀಡಲಾಗುತ್ತಿದೆ. ಗಂಟೆ ಆಧಾರದ ಬಾಡಿಗೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲು ನಿಲ್ದಾಣದ ಮೂಲಕ ನಿತ್ಯವೂ ಪ್ರಯಾಣಿಸುವ ಗಣೇಶ್ ಬಾಬು ಎನ್ನುವವರು, 'ಇದೊಂದು ಉತ್ತಮ ಕ್ರಮವಾಗಿದೆ. ಆದರೆ, ಸುರಕ್ಷತೆ ಉದ್ದೇಶದಿಂದ ಮುಂಗಡ ಹಣ ಪಾವತಿಸುವ ನಿಯಮವಿದೆ. ರೈಲ್ವೆಯ ಈ ಕ್ರಮದಿಂದಾಗಿ, ಜನರು ಕುತೂಹಲಕ್ಕೆ ಎಂಬಂತೆ ಒಂದೆರಡು ಬಾರಿ ಈ ಸೇವೆ ಬಳಸಿಕೊಂಡು ಬಳಿಕ ಹಿಂದೆ ಸರಿಯಲಿದ್ದಾರೆ. ಗ್ರಾಹಕರಿಂದ ಹಣ ಪಡೆಯುವ ಬದಲು ರೈಲ್ವೆಯೇ ಬೈಕ್‌ಗಳಿಗೆ ಸುರಕ್ಷತೆಯ ಖಾತರಿ ನೀಡಬಹುದು' ಎಂದು ಸಲಹೆ ನೀಡಿದ್ದಾರೆ.
ಮುಂದುವರಿದು, ಬೈಕ್‌ಗಳಲ್ಲಿ ಜಿಪಿಎಸ್ ಅಳವಡಿಸಲಾಗಿದೆ. ಅವುಗಳನ್ನು ಪತ್ತೆಹಚ್ಚಬಹುದು. ಹೀಗಾಗಿ, ಮುಂಗಡ ಹಣದ ಹೊರೆ ಹೇರುವ ಅಗತ್ಯವಿಲ್ಲ. ಕುತೂಹಲಕಾರಿ ಸಂಗತಿ ಎಂದರೆ, ಈ ಸೇವೆ ರೈಲು ಪ್ರಯಾಣಿಕರಲ್ಲದವರಿಗೂ ಲಭ್ಯವಾಗುವಂತಾಗಬೇಕು. ರೈಲು ಪ್ರಯಾಣಿಕರಿಗೆ ಈ ಸೇವೆಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇ-ಬೈಕ್‌ಗಳನ್ನು ಒಂದು ಬಾರಿ ಚಾರ್ಜ್ ಮಾಡಿದರೆ 130 ಕಿಮೀ ವರೆಗೂ ಪ್ರಯಾಣಿಸಹುದಾಗಿದೆ. ಜಿಲ್ಲೆಯಿಂದ ಹೊರಭಾಗದಲ್ಲಿ ಈ ಬೈಕ್‌ಗಳನ್ನು ಚಾಲನೆ ಮಾಡಲಾಗದು. ಒಂದುವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ, ಸಿಬ್ಬಂದಿಯೇ ಸ್ಥಳಕ್ಕೆ ಆಗಮಿಸಿ, ಗ್ರಾಹಕರು ತೆರಳಬೇಕಿದ್ದ ಪ್ರದೇಶಕ್ಕೆ ಬಿಟ್ಟುಕೊಡಲಿದ್ದಾರೆ ಎಂದು ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.