ಉಪ್ಪಳ : ಕೊರೊನಾ ಕಾಲದ ದೀರ್ಘಕಾಲದ ಶಾಲಾ ರಜೆಯ ಬಳಿಕ ಶಾಲೆ ಪುನರಾರಂಭ ಗೊಂಡಾಗ ಕೇರಳದಲ್ಲಿ ಮರಳಿ ಶಾಲೆಗೆ ಎನ್ನುವ ಘೋಷಣೆ ಯೊಂದಿಗೆ ಪ್ರವೇಶೋತ್ಸವದ ಮೂಲಕ ಶಾಲೆ ಆರಂಭ ಗೊಂಡಿತ್ತು. ಕೇರಳ ಸರ್ಕಾರ ವಿದ್ಯಾಭ್ಯಾಸ ಇಲಾಖೆಯ ಕೈಟ್(ಕೇರಳ ಇನ್ಪ್ರಾ ಸ್ಟಕ್ಚರ್ ಆಂಡ್ ಟೆಕ್ನಫಲಜಿ ಫಾರ್ ಎಜ್ಯುಕೇಶನ್) ಸಂಸ್ಥೆಯು ಆ ಬಗ್ಗೆ ರಾಜ್ಯದಾದ್ಯಂತ ಶಾಲೆಗಳಿಂದ ಪ್ರವೇಶೋತ್ಸವದ ಉತ್ತಮ ಫೆÇಟೊ ದಾಖಲೆ ಇಲಾಖೆ ಆಹ್ವಾನಿಸಿತ್ತು. ಬಂದ ಚಿತ್ರಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಬಹುಮಾನಗಳ ಘೋಷಣೆ ಪ್ರಕಟವಾಗಿದ್ದು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ 12400 ಚಿತ್ರಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ ಮೂರು ಫೆÇೀಟೋಗಳಿಗೆ ಬಹುಮಾನ ಘೋಷಿಸಲಾಗಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಗೆ ತೃತೀಯ ಬಹುಮಾನ ಲಭಿಸಿರುತ್ತದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ತಿಳಿಸಿರುತ್ತಾರೆ.