ಕಾಸರಗೋಡು: ಯುವಮೋರ್ಚಾ ನೇತಾರರಾಗಿದ್ದ ಸ್ವರ್ಗೀಯ ಕೆ.ಟಿ ಜಯಕೃಷ್ಣನ್ ಮಾಸ್ಟರ್ ಸಂಸ್ಮರಣಾ ದಿನಾಚರಣೆ ಡಿ.1ರಂದು ಕಾಞಂಗಾಡಿನಲ್ಲಿ ಜರುಗಲಿದೆ. ಯುವಮೋರ್ಚಾ ಕಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮ ಜರುಗಲಿದ್ದು, ಸಾರ್ವಜನಿಕ ರ್ಯಾಲಿ ಹಾಗೂ ಸಭಾಕಾರ್ಯಕ್ರಮ ಜರುಗಲಿದೆ.
ಕಾಞಂಗಾಡಿನ ನಾರ್ತ್ ಕೋಟಚ್ಚೇರಿಯಿಂದ ಮಧ್ಯಾಹ್ನ 3ಕ್ಕೆ ರ್ಯಾಲಿ ಆರಂಭಗೊಳ್ಳಳಿದ್ದು, 4ಕ್ಕೆ ಕಾಞಂಗಾಡು ಅಲಾಮಿಪಳ್ಳಿ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯುವುದು. ರಾಷ್ಟ್ರೀಯ, ರಾಜ್ಯ ಸಮಿತಿ ಮುಖಮಡರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಾರ್ವಜನಿಕ ಸಮಾರಂಭ ನಡೆಯುವ ಸ್ಥಳದಲ್ಲಿಅಳವಡಿಸಲಿರುವ ಧ್ವಜಸ್ತಂಬದ ಮೆರವಣಿಗೆ ಮಂಗಳವಾರ ದಿ. ಮಡಿಕೈ ಕಮ್ಮಾರನ್ ಸ್ಮøತಿಪಂಟಪದಿಂದ ಆರಂಭಗೊಂಡು ಅಲಾಮಿಪಳ್ಳಿ ವರೆಗೆ ನಡೆಯಿತು.