ಒಟ್ಟಾವಾ: ಆಗಾಗ್ಗೆ ಪಶ್ಚಿಮದ ರಾಷ್ಟ್ರಗಳನ್ನು ಪರಸ್ಪರ ಎತ್ತಿಕಟ್ಟುವ ನಾಟಕವಾಡುತ್ತಿರುವ ಚೀನಾದ ವಿರುದ್ಧ ಪಶ್ಚಿಮ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಚೀನಾದ ಹೆಚ್ಚಿನ ಬಲವಂತದ ರಾಜತಾಂತ್ರಿಕತೆ ವಿರುದ್ಧ ಸಮಾನ ಮನಸ್ಕ ರಾಷ್ಟ್ರಗಳು ಒಟ್ಟಾಗಬೇಕು ಎಂದು ಕೆನಡಾದ ಟೆಲಿವಿಷನ್ ನೆಟ್ ವರ್ಕ್ ಗ್ಲೋಬಲ್ ಟೆಲಿವಿಷನ್ ಗೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಟ್ರುಡೊ ಹೇಳಿದ್ದಾರೆ.
ನಾವು ಒಟ್ಟಾಗಿ ಅತ್ಯುತ್ತಮವಾದ ಕೆಲಸ ಮಾಡಬೇಕಾದ ಅಗತ್ಯವಿದೆ ಮತ್ತು ದೃಢವಾಗಿ ನಿಲ್ಲಬೇಕಾಗಿದೆ. ಇದರಿಂದ ಚೀನಾ ನಾಟಕ ವಾಡಲು ಸಾಧ್ಯವಿಲ್ಲ ಮತ್ತು ನಮ್ಮಲ್ಲಿಯೇ ಪರಸ್ಪರ ಎತ್ತಿಕಟ್ಟಿ ವಿಭಜಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾವು ಸ್ಪರ್ಧೆ ನೀಡುವಂತಹರಾಗಿದ್ದು, ಮುಕ್ತ ಮಾರುಕಟ್ಟೆ ಹಾದಿಯಲ್ಲಿ ಚೀನಾ ಸಮಯಕ್ಕೆ ತಕ್ಕಂತೆ ನಮ್ಮಲ್ಲಿಯೇ ಪರಸ್ಪರ ಎತ್ತಿಕಟ್ಟುವ ನಾಟಕವಾಡುತ್ತಿದೆ. ನಾವುಗಳು ಅತ್ಯುತ್ತಮವಾಗಿ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಮತ್ತು ಸದೃಢವಾಗಿ ನಿಲ್ಲಬೇಕಾಗಿದೆ. ಇದರಿಂದ ಚೀನಾ ನಮ್ಮನ್ನು ವಿಭಜಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ 2022ರ ಬೀಜಿಂಗ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಗೇಮ್ಸ್ ಗಾಗಿ ರಾಜತಾಂತ್ರಿಕತೆಯನ್ನು ಬಹಿಷ್ಕರಿಸಿ ಕೆನಡಾ ಪ್ರಧಾನಿ ಘೋಷಿಸಿದ್ದರು. ಚೀನಾದಲ್ಲಿ ಮಾನವ ಹಕ್ಕು ಉಲ್ಲಂಘನೆ ವರದಿಯಿಂದ ಕೆನಡಾ ಅಸಮಾಧಾನಗೊಂಡಿದ್ದು, ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಗೇಮ್ಸ್ ಗಾಗಿ ರಾಜತಾಂತ್ರಿಕ ಪ್ರತಿನಿಧಿಗಳನ್ನು ಬೀಚಿಂಗ್ ಗೆ ಕಳುಹಿಸುವುದಿಲ್ಲ , ಈ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಲು ಬೆಂಬಲವನ್ನು ಮುಂದುವರೆಸುವುದಾಗಿ ಟ್ರುಡೋ ಹೇಳಿದ್ದರು.