ಕಾಸರಗೋಡು: ಯುವ ಕಿರುಚಿತ್ರ ನಿರ್ಮಾಪಕ ಗೌತಮ್ ಶೆಟ್ಟಿ ಬರೆದು ನಿರ್ದೇಶಿಸಿರುವ ಕ್ವಶ್ಚನ್ ಮಾರ್ಕ್ ಕಿರುಚಿತ್ರ ಯೂಟ್ಯೂಬ್ ನಲ್ಲಿ ಇಂದು ಸಂಜೆ ಬಿಡುಗಡೆಗೊಳ್ಳುತ್ತಿದೆ. ತುಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದ್ದು ಚಿತ್ರದ ಟೈಟಲ್ ಕುತೂಹಲ ಮೂಡಿಸಿದೆ.
ನಂಬಿಕೆ ಮತ್ತು ನೈಜತೆಯ ಕೂದಳೆಳೆಯ ಅಂತರ, ಪ್ರಶ್ನೆ ಹಾಗೂ ಸಾಮ್ಯತೆಗಳನ್ನು ಪ್ರತಿಬಿಂಬಿಸುವ ಚಿತ್ರಕ್ಕೆ ಧನು ಕುಲಾಲ್ ಸಂಕಲನಗೈದಿದ್ದಾರೆ. ಸಹಾಯಕ ನಿರ್ದೇಶಕರಾಗಿ ವಿಷ್ಣು, ರಾಹುಲ್ ರೈ ಸಹಕರಿಸಿದ್ದಾರೆ. ಕಿರುಚಿತ್ರದಲ್ಲಿ ವಿಜೇಶ್, ಅಶ್ವಥ್, ನವನೀತ, ಪುರುಷೋತ್ತಮ ಭಟ್, ಚಂದ್ರಹಾಸ ರೈ ತಾರಾಗಣದಲ್ಲಿದ್ದಾರೆ. ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಗುರು ಬಾಯಾರ್ ರೆಕಾರ್ಡಿ|ಂಗ್ ಮತ್ತು ಮಿಕ್ಸಿಂಗ್ ನಲ್ಲಿ ಮಿಂಚಿದ್ದಾರೆ. ಕಿರುಚಿತ್ರದ ತುಳು ಅವತರಣಿಕೆಯನ್ನು ಸುಖದ ಸ್ಟುಡಿಯೋಸ್ ಚಾನಲ್ ಹಾಗೂ ಮಲೆಯಾಳಂ ಅವತರಣಿಕೆಯನ್ನು ಗುಡ್ ವಿಲ್ ಎಂಟರ್ ಟ್ರೈನ್ಮೆಂಟ್ ಚಾನಲ್ ನಿರ್ವಹಿಸುತ್ತಿದೆ.