ನವದೆಹಲಿ: ಅಮಾನತುಗೊಂಡಿರುವ ರಾಜ್ಯಸಭೆಯ ಸಂಸದರಿಗೆ ದೇಶದ ಜನ ಈ ಹಿಂದೆಯೇ ಪಾಠ ಕಲಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಎರಡು ಲೋಕಸಭೆ ಚುನಾವಣೆಗಳ ಸೋಲನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ನವದೆಹಲಿ: ಅಮಾನತುಗೊಂಡಿರುವ ರಾಜ್ಯಸಭೆಯ ಸಂಸದರಿಗೆ ದೇಶದ ಜನ ಈ ಹಿಂದೆಯೇ ಪಾಠ ಕಲಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಎರಡು ಲೋಕಸಭೆ ಚುನಾವಣೆಗಳ ಸೋಲನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
12 ಸಂಸದರ ಅಮಾನತು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದರ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಅಮಾನತಾಗಿರುವ ಸಂಸದರು ಕ್ಷಮೆಯಾಚಿಸಿ ಸದನಕ್ಕೆ ಬರಲಿ. ಸರ್ಕಾರವು ಅವರ ಟೀಕೆ ಹಾಗೂ ಸಲಹೆಗಳನ್ನು ಕೇಳಲು ಸಿದ್ಧವಿದೆ ಎಂದು ಜೋಶಿ ಹೇಳಿದ್ದಾರೆ.
ಪ್ರತಿಪಕ್ಷಗಳು ಕೆಲವೊಮ್ಮೆ ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಳ್ಳುತ್ತವೆ. ಮತ್ತೆ ಕೆಲವೊಮ್ಮೆ ಕಲಾಪಕ್ಕೆ ಅಡ್ಡಿಪಡಿಸುತ್ತವೆ. ನಿಜವಾಗಿ ಪ್ರತಿಪಕ್ಷಗಳ ಕಾರ್ಯತಂತ್ರ ಏನು ಎಂದು ಜೋಶಿ ಪ್ರಶ್ನಿಸಿದ್ದಾರೆ.