HEALTH TIPS

ಈ ಆಹಾರಗಳನ್ನು ಸೇವಿಸುವುರಿಂದ ನೈಸರ್ಗಿಕವಾಗಿ ನಿಮ್ಮ ತೂಕ ಕಳೆದುಕೊಳ್ಳಬಹುದು

      ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ ?ಆದರೆ ಈ ತಂಪಿನ ವಾತಾವರಣ ನಿಮ್ಮನ್ನು ಬಿಸಿಬಿಸಿ ಕುರುಕಲು ತಿಂಡಿಗಳನ್ನು ತಿನ್ನಲು ಪ್ರೇರೇಪಿಸುತ್ತಿರಬಹುದು . ಇದರಿಂದ ನಿಮ್ಮ ತೂಕ ಇಳಿಸಿಕೊಳ್ಳುವ ಗುರಿ ತಲುಪಲು ಕಷ್ಟಕರವಾಗುತ್ತಿರಬಹುದು. ಚಿಂತೆ ಬಿಡಿ, ನಾವಿಂದು, ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಕೆಲವೊಂದು ಆಹಾರಗಳ ಬಗ್ಗೆ ಹೇಳಲಿದ್ದೇವೆ. ಇದರಿಂದ ನಿಮ್ಮ ತಿನ್ನುವ ಬಯಕೆಯೂ ಈಡೇರುವುದು, ತೂಕವೂ ನಷ್ಟವಾಗುವುದು.

     ಚಳಿಗಾಲವು ವಿವಿಧ ಹಣ್ಣುಗಳು, ತರಕಾರಿಗಳು ಮತ್ತು ಮಸಾಲೆಗಳು ಸಿಗುವ ಸೀಸನ್ ಆಗಿದೆ. ಇವು ನೈಸರ್ಗಿಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತವೆ ಎಂದು ಸಾಬೀತೂ ಆಗಿದೆ. ಇಂತಹ ಆಹಾರಗಳು ದೀರ್ಘಾವಧಿಯ ತೂಕ ನಷ್ಟಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಹೊಂದಿದ್ದು, ಸುಲಭವಾಗಿ ರುಕಟ್ಟೆಯಲ್ಲಿ ಲಭ್ಯವಿವೆ. ಅಂತಹ ಆಹಾರಗಳಾವುವು ಎಂಬುದನ್ನು ಇಲ್ಲಿ ನೋಡೋಣ.

        

              ಈ ಕೆಳಗೆ ನಾವು ಐದು ಅತ್ಯುತ್ತಮ ಚಳಿಗಾಲದ ಆಹಾರಗಳನ್ನು ಪಟ್ಟಿ ಮಾಡಿದ್ದೇವೆ, ಇವು ತೂಕ ನಷ್ಟಕ್ಕೆ ಸಹಾಯ ಮಾಡುತ್ತವೆ: ಕ್ಯಾರೆಟ್:

           ಕ್ಯಾರೆಟ್ನಲ್ಲಿ ಫೈಬರ್ ಅಧಿಕವಾಗಿದ್ದು, ಇದು ಆಹಾರವನ್ನು ಒಡೆಯಲು ಮತ್ತು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನೀವು ದೀರ್ಘಕಾಲದವರಗೆ ಹೊಟ್ಟೆ ತುಂಬಿದಂತೆ ಇರಬಹುದು. ಹೊಟ್ಟೆ ತುಂಬಿದ್ದಾಗ ಸಾಮಾನ್ಯವಾಗಿ ಯಾರೂ, ಮತ್ತೆ ತಿನ್ನುವ ಮನಸ್ಸು ಮಾಡುವುದಿಲ್ಲ, ಸ್ವಾಭಾವಿಕವಾಗಿಯೇ ತಿನ್ನುವುದು ಕಡಿಮೆಯಾಗುತ್ತದೆ. ಈ ಮೂಲಕ ತೂಕ ನಿಯಂತ್ರಣಕ್ಕೆ ಬರುತ್ತದೆ.

ಜೊತೆಗೆ ಕ್ಯಾರೆಟ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಪಿಷ್ಟವನ್ನು ಹೊಂದಿರುವುದಿಲ್ಲ. ಆದ್ದರಿಂದ ಅವುಗಳನ್ನು ಹಾಗೆಯೇ ತಿನ್ನಬಹುದು ಅಥವಾ ಅವುಗಳನ್ನು ಸ್ಮೂಥಿಗಳು, ಸಲಾಡ್ಗಳು ಅಥವಾ ಸೂಪ್ಗಳ ರೂಪದಲ್ಲಿ ಸೇವಿಸಬಹುದು.


                 

                            ದಾಲ್ಚಿನ್ನಿ:

              ಈ ಅದ್ಭುತವಾದ ಮಸಾಲೆಯು ನಿಮಗೆ ತೂಕ ಕಳೆದುಕೊಳ್ಳಲು ಸಹಾಯ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ದಾಲ್ಚಿನ್ನಿ ನೈಸರ್ಗಿಕವಾಗಿ ಚಯಾಪಚಯವನ್ನು ಹೆಚ್ಚಿಸುತ್ತದೆ . ಜರ್ನಲ್ ಆಫ್ ನ್ಯೂಟ್ರಿಷನಲ್ ಸೈನ್ಸ್ ಅಂಡ್ ವಿಟಮಿನಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ದಾಲ್ಚಿನ್ನಿಯಲ್ಲಿರುವ ಸಿನ್ನಮಾಲ್ಡಿಹೈಡ್ , ಕೊಬ್ಬಿನ ಒಳಾಂಗಗಳ ಚಯಾಪಚಯವನ್ನು ಹೆಚ್ಚಿಸಿ, ಕೊಬ್ಬನ್ನು ಕರಗಿಸುತ್ತದೆ ಮತ್ತು ತೂಕ ನಷ್ಟವನ್ನು ವೇಗಗೊಳಿಸುತ್ತದೆ. ಇದು ಇನ್ಸುಲಿನ್ ಉತ್ತೇಜಕವೂ ಆಗಿದೆ.

          

                               ಮೆಂತ್ಯೆ ಕಾಳು:

        ಮೆಂತ್ಯ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಬೀಜಗಳು ಚಯಾಪಚಯವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಬೆಳಗ್ಗಿನ ಉಪಹಾರಕ್ಕೆ ಮೆಂತ್ಯೆ ಗಂಜಿ ಸೇವಿಸುವುದರಿಂದ, ಆರೋಗ್ಯಕ್ಕೂ ಒಳ್ಳೆಯದು, ಹಸಿವೂ ಬೇಗ ಆಗುವುದಿಲ್ಲ. ಇದರಲ್ಲಿರುವ ನೀರಿನಲ್ಲಿ ಕರಗುವ ಅಂಶವಾದ ಗ್ಯಾಲಕ್ಟೋಮನ್ನನ್ ಕಡುಬಯಕೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮಗೆ ಕುರುಕಲು ತಿಂಡಿ ತಿನ್ನಬೇಕೆಂಬ ಮನಸ್ಸು ಆಗುವುದಿಲ್ಲ.

             

                            ಸೀಬೆಹಣ್ಣು ಅಥವಾ ಪೇರಳೆ:

               ಪೇರಳೆ ಚಳಿಗಾಲದ ಹಣ್ಣುಗಳಲ್ಲಿ ಒಂದಾಗಿದ್ದು, ನಿಮ್ಮ ದೈನಂದಿನ ಫೈಬರ್ ಅವಶ್ಯಕತೆಗಳಲ್ಲಿ ಸುಮಾರು 12% ಅನ್ನು ಒಳಗೊಂಡಿರುತ್ತದೆ. ಫೈಬರ್ ಅಂದರೆ, ಜೀರ್ಣಕ್ರಿಯೆಗೆ ಏನು ಸಮಸ್ಯೆಯಾಗುವುದಿಲ್ಲ. ಚಯಾಪಚಯ ಕ್ರಿಯೆಗೆ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು ಅವಶ್ಯಕವಾಗಿದ್ದು, ಪೇರಳೆ ನಿಮ್ಮ ಜೀರ್ಣಾಂಗ ವ್ಯವಸ್ಥೆಗೂ ಪ್ರಯೋಜನಕಾರಿಯಾಗಿದೆ.. ಜೊತೆಗೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪಾಲಕ್/ಹಸಿರು ಸೊಪ್ಪು:

                                ಪಾಲಕ್/ಹಸಿರು ಸೊಪ್ಪು:

                   ಇದು ತೂಕ ಕಡಿತ ಪ್ರಕ್ರಿಯೆಯನ್ನು ವೇಗಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ನಿಮಗೆ ಸುಲಭವಾಗುತ್ತದೆ. ದೇಹದ ಕೊಬ್ಬನ್ನು ಕಳೆದುಕೊಳ್ಳಲು, ನೀವು ಮಾಡಬೇಕಾಗಿರುವುದು ಏನೆಂದರೆ, ನಿಮ್ಮ ಆಹಾರದಲ್ಲಿ ಒಂದು ಕಪ್ ಪಾಲಕ್ ನ್ನು ಸೇರಿಸುವುದು. ಪಾಲಕ್ ಸೊಪ್ಪಿನಲ್ಲಿ ಕರಗದ ನಾರಿನಂಶ ಅಧಿಕವಾಗಿದ್ದು, ಇದು ತೂಕ ಇಳಿಸುವಲ್ಲಿ ಪ್ರಮುಖ ಅಂಶವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries