HEALTH TIPS

ಮಥುರಾದಲ್ಲಿ ಆಗದಿದ್ದರೆ ಲಾಹೋರ್‌ನಲ್ಲಿ ಕೃಷ್ಣ ದೇವಾಲಯ ನಿರ್ಮಿಸುತ್ತೇವೆ: ಚೌಧರಿ

      ಮಥುರಾ: ಮಥುರಾದಲ್ಲಿ ಕೃಷ್ಣ ದೇವಾಲಯವನ್ನು ಕಟ್ಟಲು ಸಾಧ್ಯವಾಗದಿದ್ದರೆ, ಪಾಕಿಸ್ತಾನದ ಲಾಹೋರ್‌ನಲ್ಲಿ ನಿರ್ಮಿಸುತ್ತೇವೆ ಎಂದು ಉತ್ತರ ಪ್ರದೇಶದ ಶಾಸಕ ಲಕ್ಷ್ಮಿ ನಾರಾಯಣ್ ಚೌಧರಿ ಹೇಳಿದ್ದಾರೆ.

       ದೇವಾಲಯದ ಸ್ಥಳವಾಗಿರುವ ಮಥುರಾದಲ್ಲಿ ಔರಂಗಾಜೇಬ್ ಕಾಲದಲ್ಲಿ ಹಲವು ಮಸೀದಿಗಳನ್ನು ನಿರ್ಮಿಸಲಾಗಿದೆ ಎನ್ನಲಾಗಿದ್ದು, ಈ ವಿಚಾರವಾಗಿ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

       ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚೌಧರಿ, ಶಾಹಿ ಈದ್ಗಾ ಮಸೀದಿ ಸೇರಿದಂತೆ ಕಾನ್ಸ್‌ ಕಿಲಾವರೆಗಿನ ಪೂರ್ಣ ಜಾಗದಲ್ಲಿ ಕಟ್ಟಿದರಷ್ಟೇ ಕೃಷ್ಣ ಮಂದಿರ ನಿರ್ಮಾಣ ಪೂರ್ಣಗೊಳ್ಳುವುದು ಎಂದು ಪ್ರತಿಪಾದಿಸಿದ್ದಾರೆ.

      'ಶಿಥಿಲಗೊಂಡಿರುವ ಕಾನ್ಸ್‌ ಕಿಲಾದ ಗೋಡೆಯವರೆಗೂ ದೇವಾಲಯ ಪ್ರದೇಶವನ್ನು ವಿಸ್ತರಿಸಬೇಕು. ಒಂದುವೇಳೆ ದೇವಾಲಯವನ್ನು ಮಥುರಾದಲ್ಲಿ ನಿರ್ಮಿಸಲಾಗದಿದ್ದರೆ, ಲಾಹೋರ್‌ನಲ್ಲಿ ಕಟ್ಟುತ್ತೇವೆ' ಎಂದು ಹೇಳಿದ್ದಾರೆ.

      ಕೃಷ್ಣ ದೇವಾಲಯದ ಪಕ್ಕದಲ್ಲಿರುವ ಈದ್ಗಾದಲ್ಲಿ ಭಗವಾನ್ ಕೃಷ್ಣನ ಪ್ರತಿಮೆ ಪ್ರತಿಷ್ಠಾಪನೆ ಮತ್ತು ಜಲಾಭಿಷೇಕ ನೆರವೇರಿಸಲು ಅಖಿಲ ಭಾರತ ಹಿಂದೂ ಮಹಾಸಭಾಗೆ ಡಿ.6ರಂದು ಅನುಮತಿ ನಿರಾಕರಿಸಲಾಗಿತ್ತು.

        ಜಿಲ್ಲಾಡಳಿತವು ನವೆಂಬರ್‌ 28ರಿಂದಲೇ ಸಿಆರ್‌ಪಿಸಿ ಸೆಕ್ಷನ್‌ 144 ಜಾರಿಗೊಳಿಸಿದೆ.

        ಏತನ್ಮಧ್ಯೆ, ಉತ್ತರ ಪ್ರದೇಶ ಸಚಿವ ಆನಂದ್ ಸ್ವರೂಪ್‌ ಶುಕ್ಲಾ, ಮುಸ್ಲಿಂ ಸಮುದಾಯದವರು ಮುಂದೆ ಬಂದು ಶ್ರೀ ಕೃಷ್ಣ ಜನ್ಮಭೂಮಿ ಮಥುರಾದಲ್ಲಿರುವ 'ಶ್ವೇತ ಭವನ'ವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಹೇಳಿದ್ದರು.

      ಕಾಶಿ ಮತ್ತು ಮಥುರಾದಲ್ಲಿರುವ ಮುಸ್ಲಿಂ ಧಾರ್ಮಿಕ ಕಟ್ಟಡಗಳನ್ನುದ್ದೇಶಿಸಿ, 'ಹಿಂದೂಗಳಿಗೆ ನೋವುಂಟು ಮಾಡಿರುವ ಶ್ವೇತ ಭವನವನ್ನು ತೆರವುಗೊಳಿಸುವ ಸಮಯ ಬರಲಿದೆ. ಭಾರತದಲ್ಲಿರುವ ಮುಸ್ಲಿಮರು, ತಮ್ಮ ಪೂರ್ವಜರಾದ ಬಾಬರ್‌, ಅಕ್ಬರ್‌ ಮತ್ತು ಔರಂಗಾಜೇಬ್, ದೇಶದಲ್ಲಿನ ರಾಮ ಮತ್ತು ಕೃಷ್ಣ ದೇವಾಲಯದ ಮೇಲಿನ ದಾಳಿಕೋರರು ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಡಾ. ರಾಮ ಮನೋಹರ ಲೋಹಿಯ ಹೇಳಿದ್ದಾರೆ. ಅವರಿಂದ (ದಾಳಿಕೋರರಿಂದ) ನಿರ್ಮಾಣವಾದ ಯಾವುದೇ ಕಟ್ಟಡಗಳೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಡಿ' ಎಂದು ಕರೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries