ಕಾಸರಗೋಡು: ಬೇಡಡ್ಕ ತೆಂಗು ಸಂರಕ್ಷಣಾ ಯೋಜನೆಯನ್ವಯ ತೆಂಗಿನಲ್ಲಿ ಗುಣಮಟ್ಟದ ಬೀಜಗಳ ಉತ್ಪಾದನೆ ಬಗ್ಗೆ ತರಬೇತಿ ಕಾರ್ಯಕ್ರಮ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐದಲ್ಲಿ ಜರುಗಿತು. ವಿವಿಧ ಕೃಷಿಕ ಸಂಘಟನೆ ಪ್ರತಿನಿಧಿಗಳು, ಕೃಷಿ ಕ್ರಿಯಾ ಸಮಿತಿ ಸದಸ್ಯರಿಗಾಗಿ ತರಬೇತಿ ಆಯೋಜಿಸಲಾಗಿತ್ತು.
ಸಿಪಿಸಿಆರ್‍ಐ ನಿರ್ದೇಶಕಿ ಡಾ. ಅನಿತಾ ಕರುಣ್ ಸಮಾರಂಭ ಉದ್ಘಾಟಿಸಿದರು. ಬೇಡಡ್ಕ ಗ್ರಾಪಂ ಅಧ್ಯಕ್ಷೆ ಎಂ.ಧನ್ಯಾ, ಬೇಡಡ್ಕ ತೆಂಗು ಕೃಷಿಕರ ಸೊಸೈಟಿ ಅಧ್ಯಕ್ಷ ಮುರಳಿಧರಮ್, ಕೃಷಿ ಅಧಿಕಾರಿ ಡಾ.ಎನ್. ಎಂ ಪ್ರವೀಣ್ ಉಪಸ್ಥಿತರಿದ್ದರು. ತರಬೇತಿ ಕಾರ್ಯದಲ್ಲಿ ಪಾಲ್ಗೊಂಡ ಕೃಷಿಕರಿಗೆ ಸಿಪಿಸಿಆರ್‍ಐ ತೋಟದಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು. ಸಿಪಿಸಿಆರ್‍ಐ ಹಿರಿಯ ವಿಜ್ಞಾನಿಗಳಾದ ಡಾ. ಸಿ.ತಂಬಾನ್, ಡಾ. ಕೆ. ಶಂಸುದ್ದೀನ್, ಡಾ. ಸುಧಾ ನೇತೃತ್ವ ನೀಡಿದರು.