ಕೊಚ್ಚಿ: ಮೋಹನ್ ಲಾಲ್ ಅಭಿನಯದ ಹೊಸ ಸಿನಿಮಾ ಬ್ರೋ ಡ್ಯಾಡಿಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಹನ್ ಲಾಲ್ ನಾಯಕನಾಗಿ ಪೃಥ್ವಿರಾಜ್ ನಿರ್ದೇಶನದ ಎರಡನೇ ಚಿತ್ರ ಬ್ರೋ ಡ್ಯಾಡಿ. ಈ ಪೋಸ್ಟರ್ ನ್ನು ಇಬ್ಬರೂ ನಟರು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಮೊದಲು ಡಿಸ್ನಿ ಪ್ಲಸ್ ಹಾಟ್‍ಸ್ಟಾರ್ ಮೂಲಕ ಚಿತ್ರವು ನೇರವಾಗಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಇದು ಫಸ್ಟ್ ಲುಕ್ ಮೂಲಕ ದೃಢಪಟ್ಟಿದೆ. ಇನ್ನೂ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ.
ಶ್ರೀಜಿತ್ ಎನ್ ಮತ್ತು ಬಿಬಿನ್ ಮಾಳಿಯೆಕ್ಕಲ್ ಬರೆದಿರುವ ಈ ಚಿತ್ರದಲ್ಲಿ ನಿರ್ದೇಶನದೊಂದಿಗೆ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೋಸ್ಟರ್ ನಲ್ಲಿ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಪಾತ್ರಗಳಿವೆ. ಪೋಸ್ಟರ್ ಚಿತ್ರದ ವರ್ಣರಂಜಿತ ಮನರಂಜನಾ ಸ್ವರೂಪವನ್ನು ಬಹಿರಂಗಪಡಿಸುತ್ತದೆ. ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್, ಮೀನಾ, ಲಾಲ್ ಅಲೆಕ್ಸ್, ಮುರಳಿ ಗೋಪಿ, ಕನಿಹಾ ಮತ್ತು ಸೌಬಿನ್ ಶಾಹಿರ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಆಶಿರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಬ್ರೋ ಡ್ಯಾಡಿ' ಚಿತ್ರದ ಶೂಟಿಂಗ್ ಕೇರಳದಲ್ಲಿ ಆರಂಭವಾಗಿ ಬಳಿಕ ತೆಲಂಗಾಣದಲ್ಲಿ ನಡೆಸಲಾಯಿತು. ಚಿತ್ರದ ಛಾಯಾಗ್ರಹಣ ಪೃಥ್ವಿರಾಜ್ ಪೆÇ್ರಡಕ್ಷನ್ಸ್ ಮತ್ತು ಅಭಿನಂದನ್ ರಾಮಾನುಜ ಅವರ ಛಾಯಾಗ್ರಹಣವಿದೆ. ಸಂಗೀತ ದೀಪಕ್ ದೇವ್. ಅಖಿಲೇಶ್ ಮೋಹನ್ ಸಂಕಲನ. ಕಲಾ ನಿರ್ದೇಶನ ಮೋಹನ್ ದಾಸ್ ಅವರದಿದೆ.