ಕೊಚ್ಚಿ: ಕಣ್ಣೂರು ವಿವಿ ಉಪಕುಲಪತಿ ಮರುನೇಮಕವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಏಕ ಪೀಠದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದಾರೆ. ತೀರ್ಪಿನ ವಿರುದ್ಧ ಅರ್ಜಿದಾರರು ವಿಭಾಗೀಯ ಪೀಠದ ಮೊರೆ ಹೋಗಿದ್ದಾರೆ. ಈ ಅರ್ಜಿಯನ್ನು ನ್ಯಾಯಾಲಯ ನಾಳೆ ಪರಿಗಣಿಸಲಿದೆ ಎಂದು ತಿಳಿದುಬಂದಿದೆ. ನಿನ್ನೆ ಡಾ. ಗೋಪಿನಾಥ್ ರವೀಂದ್ರನ್ ಮರು ನೇಮಕವನ್ನು ಏಕ ಪೀಠ ಎತ್ತಿ ಹಿಡಿದಿತ್ತು.
ಏಕ ಪೀಠದ ನಿರೀಕ್ಷಣೆಯು ತಪ್ಪಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ನೇಮಕಾತಿ ಮತ್ತು ಮರುನಿಯೋಜನೆ ನಡುವಿನ ವ್ಯತ್ಯಾಸವನ್ನು ಪರಿಗಣಿಸಬೇಕು. ವಿಸಿ ನೇಮಕಾತಿಯಲ್ಲಿನ ಷರತ್ತುಗಳೇ ಮರು ನೇಮಕದ ಸಂದರ್ಭದಲ್ಲೂ ಅನ್ವಯವಾಗುತ್ತವೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಮರುನೇಮಕಕ್ಕೆ 60 ವರ್ಷ ತುಂಬದಿರುವ ಷರತ್ತು ಅನ್ವಯವಾಗುವುದಿಲ್ಲ ಎಂದು ಏಕ ಸದಸ್ಯ ಪೀಠ ಹೇಳಿದೆ. ನಂತರ ಸೆನೆಟ್ ಸದಸ್ಯ ಡಾ. ಪ್ರೇಮಚಂದ್ರನ್ ಕೀರೋತ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಡಾ.ಶಿನೋ ಪಿ.ಜೋಸ್ ಸಲ್ಲಿಸಿದ್ದ ಕೋ ವಾರೆಂಟ್ ಅರ್ಜಿಯನ್ನು ನ್ಯಾಯಮೂರ್ತಿ ಅಮಿತ್ ರಾವಲ್ ವಜಾಗೊಳಿಸಿದ್ದಾರೆ. Quo Warranto ಎನ್ನುವುದು ಅಧಿಕೃತ ಸ್ಥಾನದಲ್ಲಿರುವ ವ್ಯಕ್ತಿಗೆ ಆ ಸ್ಥಾನದಲ್ಲಿ ಅವನು ಅಥವಾ ಅವಳು ಯಾವ ಅಧಿಕಾರವನ್ನು ಹೊಂದಿದ್ದಾರೆಂದು ತಿಳಿಸಲು ಕೇಳುವ ಕ್ರಿಯೆಯಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಇದರ ಅಧಿಕಾರ ವ್ಯಾಪ್ತಿ ಇದೆ. ಈ ವಜಾ ಸಂದರ್ಭದಲ್ಲಿ ವಿಭಾಗೀಯ ಪೀಠವನ್ನು ಸಂಪರ್ಕಿಸಲಾಯಿತು.