ನವದೆಹಲಿ: ದೆಹಲಿ ಹಾಗೂ ಎನ್ ಸಿಆರ್ ಪ್ರದೇಶಗಳಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಹರ್ಯಾಣದ ಫರೀದಾಬಾದ್ ನಲ್ಲಿರುವ ಸಿರೆಂಜ್ ಉತ್ಪಾದನಾ ಸಂಸ್ಥೆಗೆ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಾಗಿದೆ.
ಈ ಸೂಚನೆಯಿಂದಾಗಿ ಸೂಜಿಗಳ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಿರೆಂಜ್ಸ್ ಹಾಗೂ ವೈದ್ಯಕೀಯ ಉಪಕರಣಗಳ ನಿಯಮಿತ (ಹೆಚ್ಎಂ ಡಿ) ಸಿರಿಂಜ್ ಗಳ ಸ್ಥಗಿತಗೊಳಿಸಬೇಕಿರುವ ಸಂಸ್ಥೆಯಾಗಿದೆ. "ಇನ್ನೂ ಇತರ ಸಂಸ್ಥೆಗಳೊಂದಿಗೆ ನಮ್ಮ ಸಂಸ್ಥೆಯ ಸಿರಿಂಜ್ ಸೂಚಿಗಳ ಉತ್ಪಾದನಾ ಘಟಕಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ ಎಂದು ಹೆಚ್ಎಂಡಿ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ನಾಥ್ ತಿಳಿಸಿದ್ದಾರೆ.
ನಾವು ಪ್ರತಿ ದಿನ 1.5 ಕೋಟಿ ಸೂಜಿ ಹಾಗೂ 80 ಲಕ್ಷ ಸಿರಿಂಜ್ ಗಳನ್ನು ಉತ್ಪಾದಿಸುತ್ತಿದ್ದೆವು. ಈಗ ಇದು ಸ್ಥಗಿತಗೊಂಡಿದೆ. ಸೋಮವಾರದಿಂದ ತುರ್ತು ಸಂಗ್ರಹದ ಮೂಲಕ ಪೂರೈಕೆ ಮಾಡಿದರೂ ಎರಡು ದಿನಗಳ ಮೇಲೆ ಪೂರೈಕೆ ಮಾಡುವಸ್ತು ದಾಸ್ತಾನು ಇಲ್ಲ. ಮಾತೃ ಘಟಕವನ್ನೇ ನೆಚ್ಚಿಕೊಂಡಿರುವ ಇತರ ಫ್ಯಾಕ್ಟರಿಗಳೂ ಸಹ ಮುಚ್ಚಲ್ಪಡುತ್ತವೆ ಹಾಗೂ ದಿನ 1.2 ಕೋಟಿ ಸಿರಿಂಜ್ ಗಳು ರಾಷ್ಟ್ರವ್ಯಾಪಿ ಲಭ್ಯವಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.
ರಾಜೀವ್ ನಾಥ್ ನೀಡಿರುವ ಮಾಹಿತಿಯ ಪ್ರಕಾರ ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಸಿರಿಂಜ್ ಗಳ ಕೊರತೆ ಈಗಾಗಲೇ ಉಂಟಾಗಿದ್ದು, ರಫ್ತು ನಿರ್ಬಂಧವನ್ನು ಸರ್ಕಾರ ಜಾರಿಗೆ ತಂದಿದೆ. ರಾಜೀವ್ ನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಗೆ ಪತ್ರ ಬರೆದಿದ್ದು, ಸಿರಿಂಜ್ ಉತ್ಪಾದನೆಗೆ ಸಂಬಂಧಿಸಿದ ಸಂಸ್ಥೆಗಳನ್ನು ಎನ್ ಡಿಎಂ ಕಾಯ್ದೆಯ ಅಡಿಯಲಿ ರಾಷ್ಟ್ರೀಯ ಮಹತ್ವದ ಉತ್ಪಾದಕಗಳೆಂದು ಘೋಷಿಸುವುದಕ್ಕೆ ಆಗ್ರಹಿಸಿದ್ದಾರೆ.