ಕೋಝಿಕ್ಕೋಡ್: ಕೇರಳದ ಸರ್ಕಾರಿ ಶಾಲೆಗಳಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಸಮವಸ್ತ್ರವನ್ನು ಜಾರಿಗೆ ತರಲು ಸರ್ಕಾರದ ಅಭ್ಯಂತರವಿಲ್ಲ. ಅನಗತ್ಯ ವಿವಾದಗಳ ಅಗತ್ಯವೂ ಇಲ್ಲ ಮತ್ತು ಲಿಂಗ-ಸಮಾನತೆ ಶಿಕ್ಷಣವನ್ನು ಉತ್ತೇಜಿಸಲಾಗುವುದು ಎಂದು ಸಚಿವ ಶಿವಂಕುಟ್ಟಿ ಹೇಳಿರುವರು.
ಕೋಝಿಕ್ಕೋಡ್ ಬಾಲುಸ್ಸೆರಿ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಲಿಂಗ ಸಮಾನತೆ ಸಮವಸ್ತ್ರ ವ್ಯವಸ್ಥೆ ಜಾರಿಯಿಂದಾಗಿ ವಿವಾದ ಉದ್ಭವಿಸಿದೆ. ವಿವಿಧ ಮುಸ್ಲಿಂ ಸಂಘಟನೆಗಳ ನೇತೃತ್ವದ ಸಮನ್ವಯ ಸಮಿತಿಯು ಡ್ರೆಸ್ ಕೋಡ್ ಏಕೀಕರಣದ ವಿರುದ್ಧ ಹರಿಹಾಯ್ದಿದೆ. MSF ಕೂಡ ಟೀಕೆ ವ್ಯಕ್ತಪಡಿಸಿದೆ.
ಹುಡುಗರ ಡ್ರೆಸ್ ಕೋಡ್ ನ್ನು ಹುಡುಗಿಯರ ಮೇಲೆ ಹೇರಲಾಗಿದೆ ಎಂಬ ಆರೋಪದ ಮೇಲೆ ಪ್ರತಿಭಟನೆ ನಡೆದಿದೆ. ಎಂಎಸ್ ಎಫ್ ಸೇರಿದಂತೆ ಮುಸ್ಲಿಂ ಸಂಘಟನೆಗಳು ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿವೆ. ಅರ್ಜಿಯು ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕೋರಿವೆ.
ಬಾಲುಸ್ಸೆರಿ GGHSS ಶಾಲೆ ಜೆಂಡರ್ ನ್ಯೂಟ್ರಲ್ ಸಮವಸ್ತ್ರದ ಪರಿಕಲ್ಪನೆಯನ್ನು ಜಾರಿಗೆ ತಂದ ರಾಜ್ಯದ ಮೊದಲ ಹೈಯರ್ ಸೆಕೆಂಡರಿ ಶಾಲೆಯಾಗಿದೆ. ಸರ್ಕಾರದ ಆದೇಶವಿಲ್ಲದೆ ಇಂತಹ ನಿರ್ಧಾರಗಳನ್ನು ಜಾರಿಗೆ ತರುವುದರ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಲು ಸಮನ್ವಯ ಸಮಿತಿ ನಿರ್ಧರಿಸಿದೆ. ಆದರೆ, ಪೋಷಕರು ಮತ್ತು ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾಲೆಯ ಅಧಿಕಾರಿಗಳು ತಿಳಿಸಿದ್ದಾರೆ.